ಲಿಂಗಸುಗೂರು,ಜೂ.೦೭-
ಸಂತೆಕಲ್ಲೂರ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗುವ ರೈತರ ಜಮೀನುಗಳಿಗೆ ಭೂ ಸ್ವಾಧೀನ ಮಸೂದೆ ಪ್ರಕಾರ ರೈತರಿಗೆ ಪರಿಹಾರ ನೀಡದೆ ಹುನಗುಂದ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ಮೀನಾಮೇಷ ಮಾಡುವ ಮುಖಾಂತರ ರೈತರಿಗೆ ಮರಣ ಶಾಸನ ಬರೆಯಲು ಹೊರಟಿರುವುದು ಖಂಡನಿಯವಾಗಿದೆ ಎಂದು ಸಂತೆಕಲ್ಲೂರ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
ಇದನ್ನು ಸರಿಪಡಿಸಲು ಬಂದ ಅಧಿಕಾರಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಜ್ಯೂನಿಯರ್ ಇಂಜಿನಿಯರ್ ಗೋಪಾಲ ಗೆನ್ನೂರ ಅವರಿಗೆ ರೈತರು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.
ರಸ್ತೆ ಅಗಲೀಕರಣದ ಬಗ್ಗೆ ಅಧಿಕಾರಿಗಳು ರೈತರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ರೈತರ ಜಮೀನುಗಳಲ್ಲಿ ಭೂಮಿ ಅಗೆದು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ೨೦೨೨- ೨೦೨೩ ಪ್ರಕಾರ ಸರ್ಕಾರ ಎನ್ ಎಚ್ ೧೫೦ ಎ ಹೆದ್ದಾರಿ ನಡೆಯುತ್ತಿದೆ ಆದರೆ ಅಧಿಕಾರಿಗಳು ಗುತ್ತಿಗೆ ಪಡೆದ ಕಂಪನಿ ಮಾಲಿಕರು ಸೇರಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡದೆ ರಸ್ತೆ ಅಭಿವೃದ್ಧಿ ಮಾಡುವುದು ಖಂಡಿಸುತ್ತದೆ ಎಂದು ದೇವರಾಜ್ ಸಂತೆಕಲ್ಲೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮತವಾದ ಸಂಘಟನೆ ತೀವ್ರವಾಗಿ ಖಂಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಎರಡು ಮೂರು ದಿನಗಳ ಒಳಗೆ ರೈತರಿಗೆ ಪರಿಹಾರ ನೀಡದಿದ್ದರೆ ರೈತರಿಂದ ರಸ್ತೆ ತಡೆ ಚಳವಳಿ ಎಚ್ಚರಿಕೆ
ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಯಿಸಿದ್ದಾರೆ.
ಸರ್ಕಾರದ ಗೆಜೆಟೆಡ್ ನೋಟಿಫಿಕೇಶನ್ ಪ್ರಕಾರ ೬(೧) ೪ (೧) ಸೆಕ್ಷನ್ ಪ್ರಕಾರ ರೈತರಿಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಏನಾದರೂ ರೈತರಿಗೆ ತೊಂದರೆ ಯಾದರೆ ನೇರವಾಗಿ ಅಧಿಕಾರಿಗಳೆ ಕಾರಣವಾಗುತ್ತಾರೆ ಎಂದು ಯಲ್ಲಾಲಿಂಗ ಕುಣಿಕೆಲ್ಲೂರ ಎನ್ ಮೂರ್ತಿ ಬಣದ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಇವರು ಗುತ್ತೆದಾರರ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡದಿದ್ದರೆ ರಸ್ತೆ ಕಾಮಗಾರಿ ಗುತ್ತಿಗೆ ಅಮ್ಮಾಪುರ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಲು ರೈತರು ಮುಂದಾಗಬೇಕಾಗುತ್ತದೆ ಎಂದು ಅಮ್ಮಾಪುರ ಕಂಪನಿ ಮಾಲೀಕರಿಗೆ ರೈತರಾದ ಚಂದ್ರರೆಡ್ಡಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಮಹೇಂದ್ರ ಗೌಡ ಈಶಪ್ಪ ಗೌಡ ಎಚ್ಚರಿಕೆ ನೀಡಿದರು .
ರೈತರು ಗುತ್ತದೆ ಪಡೆದ ಕಂಪನಿ ಮಾಲೀಕರಿಗೆ ಮಾಹಿತಿ ಕೇಳಿದರೆ ಬೆದರಿಕೆ:
ರೈತರ ಜಮೀನುಗಳಲ್ಲಿ ಹಾದು ಹೋಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಬೇಕು ಎಂದು ಗುತ್ತಿಗೆ ಪಡೆದ ಅಮ್ಮಾಪುರ ಕಂಪನಿ ಅಧಿಕಾರಿಗಳು ಮತ್ತು ಗುಮಾಸ್ತೆ ಇವರುಗಳ ಮೂಲಕ ಅಮ್ಮಾಪುರ ಕಂಪನಿಯವರು ಬೆದರಿಕೆ ಹಾಕಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ರೈತರ ಬೇಡಿಕೆಗಳು:
ಜಮೀನು ಕಳೆದುಕೊಂಡ ರೈತರಿಗೆ ೨೫ ಲಕ್ಷ ಪರಿಹಾರ ನೀಡಬೇಕು.
ರೈತರಿಗೆ ಭೂ ಸ್ವಾಧೀನ ಮಸೂದೆ ಪ್ರಕಾರ ದಾಖಲೆ ನೀಡಬೇಕು.
ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೂಡಲೇ ತಡೆಹಿಡಿದು ನೊಂದ ರೈತರಿಗೆ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಅಧಿಕಾರಿಗಳು ಮುಂದಾಗಬೇಕು.
ನಮ್ಮ ಜಮೀನುಗಳಿಗೆ ಪರಿಹಾರ ನೀಡದೆ ಇದ್ದರೆ ತಾಲೂಕಿನ ರೈತ ಸಂಘದ ಹಿತರಕ್ಷಣಾ ಸಮಿತಿ ಪ್ರಗತಿಪರ ಸಂಘಟನೆಗಳು ಸಾರ್ವಜನಿಕರ ಮೂಲಕ ಹೋರಾಟ ನಡೆಸಲಾಗುವುದು ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಜಯಕುಮಾರ್ ಕುಲಕರ್ಣಿ, ಸಂಗಮೇಶ ಅಂಗಡಿ ಸೇರಿದಂತೆ ನೂರಾರು ರೈತರು ಇದ್ದರು.