ರೈತರಿಗೆ ಮಧ್ಯಮಾವಧಿ ಸಾಲ ಕಟ್ಟಲು ಕೊನೆ ಅವಕಾಶ

ಕಲಬುರಗಿ:ನ.23: ಮಧ್ಯಾಮವಧಿ ಸಾಲದ ಬಡ್ಡಿಯಲ್ಲಿ ಶೇ.40ರಷ್ಟು ರಿಯಾಯಿತಿ ನೀಡುವ ಅವಕಾಶ ಕಲ್ಪಿಸಲಾಗಿರುವುದನ್ನು ರೈತರು ಸದುಪಯೋಗಪಡೆದುಕೊಳ್ಳಬೇಕೆಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಅಧ್ಯಕ್ಷರು ಹಾಗೂ ಸೇಡಂ ಕ್ಷೇತ್ರದ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಕೋರಿದ್ದಾರೆ.

ರೈತರಿಗೆ ಅನುಕೂಲವಾಗಲು ವನ್ ಟೈಮ್ ಸೆಟ್ಲೆಮೆಂಟ್( ಏಕ ಕಾಲಿಕ ಸಾಲ ತಿರುವಳಿ) ಯೋಜನೆ ಜಾರಿ ತರಲಾಗಿದೆ. ಈ ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ತರಲಾಗಿದ್ದು, ಬ್ಯಾಂಕ್ ನ ಅಭಿವೃದ್ಧಿ ಯಲ್ಲಿ ಪ್ರಮುಖವಾಗಿ ಹೊಸದಾಗಿ ಸಾಲ ವಿತರಿಸಲು ಮಧ್ಯಾಮವಧಿ ಸಾಲ ವಸೂಲಾಗುವುದು ಬಹು ಮುಖ್ಯವಾಗಿದೆ ಎಂದಿದ್ದಾರೆ.

ಸಾಲ ವಸೂಲಾತಿ ಸಂಬಂಧ ಈಗಾಗಲೇ ರಾಯಚೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಈಗಾಗಲೇ ನೊಟೀಸ್ ನೀಡಿದ್ದಲ್ಲದೇ ಸಿವಿಲ್ ಕೋ??9 ದಲ್ಲಿ ಧಾವೆ ಹೂಡಿ ಆಸ್ತಿ ಹರಾಜಿಗೆ ಮುಂದಾಗಿದ್ದಾರೆ. ಆದ್ದರಿಂದ ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೇ ಸಾಲ ಮರುಪಾವತಿಸುವುದು ಸೂಕ್ತವಾಗಿದೆ. ನಬಾ??9, ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ನಿಯಮಗಳನ್ನು ರೂಪಿಸಿ ಸರ್ಕಾರ ವು ಕೆಲವು ಷರತ್ತುಗಳೊಂದಿಗೆ ಓಟಿಎಸ್ ಗೆ ಅನುಮೋದನೆ ನೀಡಲಾಗಿರುತ್ತದೆ. ಹೀಗಾಗಿ ಮುಂದಿನ ತಿಂಗಳು ಡಿಸೆಂಬರ್ 31 ರವರೆಗೂ ಬಡ್ಡಿ ರಿಯಾಯಿತಿ ಯಲ್ಲಿ ಸಾಲ ತುಂಬಲು ( ವನ್ ಟೈಮ್ ಸೆಟ್ಲೆಮೆಂಟ್) ಅವಕಾಶ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್ ಈಗ ಲಾಭದತ್ತ ಹೆಜ್ಜೆ ಹಾಕಲು ಮುಂದಾಗಿದೆ. ಇದೇ ಕಾರಣಕ್ಕೆ ಓಟಿಎಸ್ ಜಾರಿಗೆ ತಂದು 18 ಕೋ.ರೂ ನಷ್ಟ ಸರಿದೂಗಿಸಲು ಮುಂದಾಗಲಾಗಿದೆ.

ಆದ್ದರಿಂದ ರೈತರು ಇದು ಕೊನೆ ಅವಕಾಶ ಎಂದು ತಿಳಿದು ಹಾಗೂ ಹರಾಜ್ ಗೆ ಅವಕಾಶ ನೀಡದೇ ಮಧ್ಯಾಮವಧಿ ಸಾಲವನ್ನು ರಿಯಾಯಿತಿ ಬಡ್ಡಿ ಯೊಂದಿಗೆ ಮರು ಪಾವತಿಸಬೇಕು. ಒಟ್ಟಾರೆ ಸಾಲ ಮರುಪಾವತಿಸದಿದ್ದರೆ ಮುಂದಾಗುವ ಕಾನೂನು ಕ್ರಮಗಳಿಗೆ ತಾವೇ (ರೈತರೇ) ಹೊಣೆಗಾರರಾಗಿರುತ್ತೀರಲ್ಲದೇ ಆವಾಗ ಬ್ಯಾಂಕ್ ಕೈ ಕಟ್ಟಿಕುಳಿತುಕೊಳ್ಳಬೇಕಾಗುತ್ತದೆಂದು ಎಂದು ಕಿವಿ ಮಾತು ಹೇಳಿರುವ ತೇಲ್ಕೂರ, ತಿಂಗಳೊಳಗೆ ಮಧ್ಯಾಮವಧಿ ಸಾಲ ಪಡೆದ ರೈತರೆಲ್ಲರೂ ಮರುಪಾವತಿಸಬೇಕೆಂದಿದ್ದಾರೆ.

ಸಾಲ ಮರುಪಾವತಿಸಿದರೆ ತಕ್ಷಣ ವೇ ಹೊಸದಾಗಿ ಸಾಲ ವಿತರಿಸಲಾಗುವುದು.

ಸಾಲ ವಸೂಲಾತಿ ಸಂಬಂಧಿಸಿದಂತೆ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ವ್ಯವಸ್ಥಾಪಕ ನಿರ್ದೇಶಕ ಶರಣಬಸಪ್ಪ ಪಾಟೀಲ್, ನಿರ್ದೇಶಕರುಗಳಾದ ಬಾಪುಗೌಡ ಪಾಟೀಲ್, ಸೋಮಶೇಖರ್ ಗೋನಾಯಕ, ಶರಣಬಸಪ್ಪ ಪಾಟೀಲ್ ಅಷ್ಠಗಿ, ಗೌತಮ ಪಾಟೀಲ್ ಅವರನ್ನೊಳಗೊಂಡ ಓಟಿಎಸ್ ಸಮಿತಿ ರಚಿಸಲಾಗಿದೆ. ಹೀಗಾಗಿ ರೈತರು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ಉಪಾಧ್ಯಕ್ಷರು, ನಿರ್ದೆಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.