ರೈತರಿಗೆ ಬೀಜ ಗೊಬ್ಬರ ತೊಂದರೆಯಾಗದಿರಲಿ

ಹಗರಿಬೊಮ್ಮನಹಳ್ಳಿ: ಜೂ.೦3 : ‘ರೈತರು ಸದ್ಯ ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಎಸ್.ಭೀಮನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಲ್ಲೂಕಿನ ಕೆಲ ಭಾಗಗಳಲ್ಲಿ ರೈತರು ಜಮೀನುಗಳನ್ನು ಬಿತ್ತನೆ ಮಾಡಲು ಸಿದ್ಧಪಡಿಸಿಕೊಂಡಿದ್ದಾರೆ. ಅವರ ಅನುಕೂಲಕ್ಕೆ ತಕ್ಕ ಹಾಗೆ ಅಧಿಕಾರಿಗಳು ಬೀಜ ವಿತರಣೆ ಮಾಡಬೇಕು. ಕಳಪೆ ಗುಣಮಟ್ಟದ ಬೀಜ ವಿತರಣೆ ಮಾಡುವಂತಿಲ್ಲ. ಒಂದು ವೇಳೆ ಬೀಜ ಕಳಪೆ ಇರುವುದು ಗಮನಕ್ಕೆ ಬಂದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ನಂತರ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಯಿತು. ಈ ವೇಳೆ ಹಲ್ದಾಳ್ ವಿಜಯಕುಮಾರ್, ಪವಾಡಿ ಹನುಮಂತಪ್ಪ,ಅಕ್ಕಿ ತೋಟೇಶ್, ಬಾಲಕೃಷ್ಣ, ಪುರಸಭೆ ಸದಸ್ಯ ಆಲ್ಲಾಭಕ್ಷಿ,ಹಂಚಿನಮನೆ ಹನುಮಂತಪ್ಪ,ಇಸ್ಮಾಯಿಲ್ ಸಾಬ್,ಹುಲ್ಮನೆ ಮಂಜುನಾಥ, ಹಾಗೂ ದೇವೇಂದ್ರಪ್ಪ,ಹುಡೇದ ಗುರುಬಸವರಾಜ್,ಹನಸಿ ದೇವರಾಜ್, ತಾಲೂಕು ದಂಡಾಧಿಕಾರಿ ಶ್ರೀಮತಿ ಶರಣಮ್ಮ ಕೃಷಿ ಇಲಾಖೆಯ ಅಧಿಕಾರಿ ಜೀವನ್ ಸಾಬ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು