
ತಾಳಿಕೋಟೆ:ಜು.16: ರೈತರಿಗೆ ಮುಂಗಾರು ಹಂಗಾಮಿಗಾಗಿ ಕೃಷಿ ಇಲಾಖೆಯಿಂದ ನೀಡಲಾಗುತ್ತಿರುವ ಬೀಜಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಅದರ ಜೊತೆಗೆ ಜಮೀನು ಹದಗೊಳಿಸುವ ಕುಂಟಿ ದಿಂಡು ಇನ್ನಿತರ ಸಲಕರಣೆಗಳು ಸಬ್ಸೀಡಿ ರೂಪದಲ್ಲಿ ರೈತರಿಗೆ ನೀಡುತ್ತಿದ್ದು ಅದನ್ನು ರೈತರಿಗೆ ಸರಿಯಾಗಿ ಮುಟ್ಟಿಸುವಂತಹ ಕೆಲಸ ಕೃಷಿ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಕೆಪಿಸಿಸಿ ಸದಸ್ಯ ಹಾಗೂ ಪ್ರಗತಿಪರ ರೈತ ಬಿ.ಎಸ್.ಪಾಟೀಲ(ಯಾಳಗಿ) ಅವರು ಹೇಳಿದರು.
ಶನಿವಾರರಂದು ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ಕೃಷಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ 2023-24ನೇ ಸಾಲಿನ ತಾಳಿಕೋಟೆ ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿ ರೈತರಿಗೆ ಬೀಜ ಮತ್ತು ಪರಿಕರಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು ಈಗಾಗಲೇ ಕೃಷಿ ಇಲಾಖೆಗೆ ತೋಗರಿ ಬೀಜ ಮತ್ತು ಹೆಸರು, ಸಜ್ಜಿ ಒಳಗೊಂಡಂತೆ ಇನ್ನಿತರ ಬೀಜಗಳು ಬಂದಿವೆ ಯಾವುದೇ ರೈತರಿಗೂ ತೊಂದರೆಯಾಗದ ರೀತಿಯಲ್ಲಿ ವಿತರಣೆ ಮಾಡಬೇಕು ಈಗೀನ ಕಾಂಗ್ರೇಸ್ ಸರ್ಕಾರವು ರೈತರ ಪರ ಕಾಳಜಿ ಉಳ್ಳುವಂತಹ ಸರ್ಕಾರವಾಗಿದ್ದು ಉತ್ತಮ ಗುಣಮಟ್ಟದ ಬೀಜಗಳು ವಿತರಣೆಯಾಗಲಿವೆ ಕೃಷಿ ಪರಿಕರಗಳು ಅರ್ಹ ರೈತರಿಗೆ ಮುಟ್ಟಿಸಬೇಕು ಬರುವ ದಿನಗಳಲ್ಲಿ ರೈತರಿಗೆ ಒಳ್ಳೆಯ ದಿನಗಳು ಬರಲಿವೆ ನಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವ ರೈತರಿಗೆ ಅನುಭವ ವೆಂಬುದು ಹೆಚ್ಚಿಗೆ ಇರುತ್ತದೆ ಕೃಷಿ ಇಲಾಖೆಯಿಂದ ನೀಡುವ ಸೌಲತ್ತುಗಳನ್ನು ಎಲ್ಲ ರೈತರು ಸದುಪಯೋಗ ಪಡೆದುಕೊಳ್ಳಬೇಕು ಹೊಸ ಹೊಸ ತಂತ್ರಜ್ಞಾನಗಳು ಬಂದಿದ್ದು ಅವುಗಳನ್ನು ಬಳಕೆ ಮಾಡಿಕೊಂಡು ರೈತರು ಉತ್ತಮ ಫಸಲನ್ನು ಪಡೆದುಕೊಂಡು ಆರ್ಥಿಕವಾಗಿ ಸಭಲರಾಗಬೇಕೆಂದು ಹೇಳಿದರು.
ಇನ್ನೋರ್ವ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ಅವರು ಮಾತನಾಡಿ ತೊಗರಿ ಬೀಜ ಬಿತ್ತುವಾಗ ರೈತರು ಟ್ರೈಕೋಡರ್ಮಾ ಪುಡಿಯನ್ನು ಪ್ರತಿ ಕೆಜಿಗೆ 5 ಗ್ರಾಮನಷ್ಟು ಬೆರಸಿ ಬಿತ್ತಬೇಕು ಈ ರೀತಿ ಮಾಡಿದಾಗ ನೆಟೆ ರೋಗದ ಪ್ರಭಾವವು ತಗ್ಗುತ್ತದೆ ರೈತರು ಬದಲಿ ಬೀಜಗಳನ್ನು ಒಂದೇ ಹೊಲದಲ್ಲಿ ಬಿತ್ತಿದಾಗ ನೆಟೆ ರೋಗದ ಪ್ರಭಾವವು ತಗ್ಗುತ್ತದೆ ಮತ್ತು ನೆಟೆ ರೋಗ ನಿರೋಧಕ ತಳಿಗಳಾದ ಜಿಆರ್‍ಜಿ-811 ಮತ್ತು ಜಿ.ಆರ್.ಜಿ.-152 ಬೆಳೆಗಳು ಕೇಂದ್ರದಲ್ಲಿ ಲಭ್ಯವಿದ್ದು ಸದರಿ ತಳಿಗಳ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ತಿಳಿ ಹೇಳಿದ ಅಧಿಕಾರಿ ಜೋಶಿ ಅವರು ಇಂದಿನ ತಂತ್ರಜ್ಞಾನ ಯುಗದಲ್ಲಿ ಅಲ್ಪಭೂಮಿಯಲ್ಲಿಯೇ ಅಗಾದವಾದ ಬೆಳೆಗಳನ್ನು ಬೆಳೆಯಬಹುದಾಗಿದೆ ಅದರ ಜೊತೆಗೆ ಉತ್ತಮ ರೀತಿಯ ಆದಾಯವನ್ನು ಗಳಿಸಬಹುದಾಗಿದೆ ದೇಶಿಯ ಪದ್ದತಿಯಲ್ಲಿ ಎತ್ತು ಮತ್ತು ಆಕಳುಗಳ ಸೇಗಣಿ ಗೋಬ್ಬರ ವರ್ಷದಿಂದ ವರ್ಷಕ್ಕೆ ಹೆಚ್ಚಿಗೆ ಫಸಲನ್ನು ಕೊಡುತ್ತದೆ ರೈತರು ಮಾಡುವ ಕೆಲಸದಲ್ಲಿಯೇ ಕೆಲವು ಬದಲಾವಣೆಗಳನ್ನು ತಂದುಕೊಳ್ಳಬೇಕಿದೆ ನಾವು ಹಾಕಿದ ಬೆಳೆಗಳಲ್ಲಿ ಮಿಶ್ರತಳಿಯ ಬೆಳೆಗಳನ್ನು ಹೆಚ್ಚಿಗೆ ಬೆಳೆಯಲು ರೂಡಿಸಿಕೊಳ್ಳಬೇಕು ಬೆಳೆಗೆ ತಕ್ಕಂತೆ ಗೊಬ್ಬರವನ್ನು ನೀಡಬೇಕು ಹೆಚ್ಚಿಗೆ ಗೊಬ್ಬರ ನೀಡಿದರೆ ಬೆಳೆ ಹೆಚ್ಚಿಗೆ ಬರುತ್ತದೆ ಎಂಬುದು ಕಲ್ಪನೆಯಿಂದ ಹೊರಬರಬೇಕು ಉತ್ತಮ ಬೆಳೆಗೆ ಅವಶ್ಯಕತೆ ಇರುವ ಗೊಬ್ಬರ ನೀಡುವ ಬಗ್ಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಪಡೆದುಕೊಳ್ಳಬೇಕು ಕೃಷಿಯಲ್ಲಿ ತಂತ್ರಜ್ಞಾನಕ್ಕೆ ಸಂಬಂದಿಸಿ ಅನೇಕ ಪರಿಕರಗಳನ್ನು ಸಬ್ಸೀಡಿ ರೂಪದಲ್ಲಿ ಸರ್ಕಾರವು ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದ ಅವರು ತೊಗರಿ ಬೀಜ ಬಿತ್ತುವಾಗ
ಈ ಸಮಯದಲ್ಲಿ ಮುಖಂಡರುಗಳಾದ ಪ್ರಭುಗೌಡ ಮದರಕಲ್ಲ, ಬಿ.ಎಸ್.ಗಬಸಾವಳಗಿ, ಶರಣುದನಿ ದೇಶಮುಖ, ಎಂ.ಕೆ.ಚೋರಗಸ್ತಿ, ಕಾರ್ತಿಕ ಕಟ್ಟಿಮನಿ, ಯಾಸೀನ ಮಮದಾಪೂರ, ಮುಸ್ತಫಾ ಚೌದ್ರಿ, ಮೋದಿನಸಾ ನಗಾರ್ಚಿ, ಪರಶುರಾಮ ತಂಗಡಗಿ, ಬಸವರಾಜ ಕುಂಭಾರ, ಸಂಗನಗೌಡ ಅಸ್ಕಿ, ಎಸ್.ಎನ್.ಪಾಟೀಲ, ಕೃಷಿ ಅಧಿಕಾರಿಗಳಾದ ಎಂ.ಎಚ್.ಬಿಳಗಿ, ಎಸ್.ಬಿ.ಪಾಲ್ಕಿ, ಸಂಗಮೇಶ ಪಾಟೀಲ, ವಿನೋದ ನಾಯಕ, ಕಿರಣ ಬೊಮ್ಮನಹಳ್ಳಿ, ಹಣಮಂತ್ರಾಯ ಕಾಮರಡ್ಡಿ, ಅಮರೇಶ ಅಂಗಡಿ, ರಾಮಣ್ಣ ಹರಿಜನ, ಅಮರೇಶ ದೇಸಾಯಿ, ಸಿದ್ದನಗೌಡ ಐನಾಪೂರ, ಮೊದಲಾದವರು ಇದ್ದರು.