ರೈತರಿಗೆ ಪರಿಹಾರ ವಿಳಂಬವಾದರೆ ರಾಜಭವನ ಮುತ್ತಿಗೆ-ಹರೀಶ್

ಸಿಂಧನೂರು.ನ.೨೩-ಅಕಾಲಿಕ ಮಳೆಗೆ ನೀರಾವರಿ ಮತ್ತು ಒಣಬೇಸಾಯದ ಬೆಳೆಗಳು ಹಾನಿಯಾಗಿದ್ದು ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದವತಿಯಿಂದ ರಾಜಭವನ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಹರೀಶ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕಾಲಿಕ ಮಳೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೀರಾವರಿ ಮತ್ತು ಒಣ ಬೇಸಾಯದ ಬೆಳೆಗಳು ಹಾನೀಗಿಡಾಗಿದ್ದು ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಇಡಾಗಿದ್ದು. ಪಕ್ಷದ ವತಿಯಿಂದ ನಾನು ಪಕ್ಷದಮುಖಂಡರ ಜೊತೆ ಹಾನಿಗೀಡಾದ ವಿವಿಧ ಜಿಲ್ಲೆಗಳ ರೈತರ ಜಮೀನುಗಳಿಗೆ ಬೇಟಿ ನೀಡಿದ್ದು ಸಿಂಧನೂರು ತಾಲೂಕಿನಲ್ಲಿಯು ಸಹ ಹಾನಿಗೀಡಾದ ಜಮೀನುಗಳಿಗೆ ಬೇಟಿ ರೈತರೊಂದಿಗೆ ಚರ್ಚಿಸಿ ಅವರ ಕಷ್ಟ ಆಲಿಸಿದ್ದೇನೆ ಎಂದರು.
ಅಕಾಲಿಕ ಮಳೆಗೆ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಸ್ಪಂದಿಸದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದ್ದು. ಪ್ರತಿ ಏಕರೆಗೆ ೪೦ಸಾವಿರ ರೂಪಾಯಿ ಬೆಳೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಪಕ್ಷದವತಯಿಂದ ವಿಧಾನ ಸೌಧ ಚಲೋ ಹಾಗೂ ರಾಜಭವನ ಮುತ್ತಿಗೆ ಹಾಕಿ ಪಕ್ಷದಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ನಡೆಸುವ ಮುಖಾಂತರ ರೈತರೊಡನೆ ಭಾವಚಿತ್ರ ತೆಗೆಸಿಕೊಂಡು ತಾಲೂಕಿನ ವಿವಿಧ ಪಕ್ಷಗಳ ಮುಖಂಡರು ಡೋಂಗಿ ತನ ಪ್ರದರ್ಶಿಸುತ್ತಿದ್ದು. ತುಂಗಭದ್ರ ನದಿಯ ನೀರನ್ನು ಹಣಕ್ಕಾಗಿ ರಾಜಕಾರಣಿಗಳು ಮಾರಿಕೊಂಡ ಕಾರಣ ಈ ಭಾಗದ ರೈತರು ೨ಬೆಳೆ ಬೆಳೆಗಳನ್ನು ಬೆಳೆಯಲು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಪರವಾಗಿ ಹೋರಾಟ ಮಾಡಿ ಮೈ ಮೇಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಹೋಗಿ ಬಂದ ನಿಜವಾದ ರೈತ ಪರ ರಾಜಕಾರಣಿಗಳು ತಾಲೂಕಿನಲ್ಲಿ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರ ನದಿ ನೀರು ಹಾಗೂ ರೈತ ಪರ ಹೋರಾಟ ನಡೆಸಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ ಎಂದು ತಮ್ಮ ಹೋರಾಟ ದಿನಗಳು ನೆನಪಿಸಿದರು.
ಎನ್‌ಸಿಪಿ ಪಕ್ಷದ ಮುಖಂಡರಾದ ಉಮೇಶ ಅರಲಹಳ್ಳಿ, ದೇವೆಂದ್ರಪ್ಪ ಮುಕ್ಕುಂದ, ಶಿವಪ್ಪ, ವಿರೇಶ, ಜಹೀರುಲ್ ಹಸನ್ ಸೇರಿದಂತೆ ಇತರರು ಇದ್ದರು.