ರೈತರಿಗೆ ಪರಿಹಾರ ನೀಡಲು ವಚನಾನಂದ ಶ್ರೀ ಒತ್ತಾಯ


ಹರಪನಹಳ್ಳಿ.ನ.೨೨: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಾವಿರಾರು ಚೀಲ ಭತ್ತ ನದಿ ಪಾಲಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.ತುಂಗಭದ್ರಾ ನದಿ ಹತ್ತಿರದ ತಾಲ್ಲೂಕಿನ ಗಡಿಭಾಗದಲ್ಲಿರುವ ತಾವರಗುಂದಿ ಗ್ರಾಮದಲ್ಲಿ ಭತ್ತದ ಫಸಲು ಹಾನಿಯಾಗಿರುವ ಗ್ರಾಮಕ್ಕೆ ಭೇಟಿ ನೀಡಿ, ರೈತರಿಗೆ ಸಾಂತ್ವನ ಮತ್ತು ಆತ್ಮಸ್ಥೈರ್ಯ ನೀಡಿ ಅವರು ಮಾತನಾಡಿದರು.ಪರಿಹಾರ ನೀಡುವ ಕುರಿತು ಈಗಾಗಲೇ ನಾವು ಜಿಲ್ಲಾಧಿಕಾರಿ ಜತೆ ಮಾತನಾಡಿರುವೆ. ಪ್ರಾಕೃತಿಕ ವಿಕೋಪದಿಂದ ನಾಡಿನ ಜನತೆ ಹೈರಾಣಾಗಿದ್ದಾರೆ. ಇಂತಹ ಸಂದರ್ಭ ಆಳುವ ಸರ್ಕಾರಗಳು ರೈತರೊಟ್ಟಿಗೆ ಇರುವುದು ಅವರ ಜವಾಬ್ದಾರಿ. ಹರಿಹರ ಪಂಚಮಸಾಲಿ ಪೀಠ ಸಂಕಷ್ಟಕ್ಕೆ ಸಿಲುಕಿದ ರೈತರೊಟ್ಟಿಗಿದೆ’ ಎಂದರು.ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಖಜಾಂಚಿ ಶಶಿಧರ ಪೂಜಾರ, ಮುಖಂಡ ಪ್ರಕಾಶ್ ಪಾಟೀಲ್, ಪಿ.ಶಿವಕುಮಾರ, ನಾಗರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಸುರೇಶ್ ಶ್ಯಾನಭೋಗ, ಮಹೇಶ, ಚನ್ನನಗೌಡ, ಶಿವಣ್ಣ, ಲಿಂಗರಾಜಪ್ಪ, ರಮೇಶ್, ಪತ್ತಾರ ಮಹೇಶ್ವರಪ್ಪ ಇದ್ದರು.