ರೈತರಿಗೆ ಪರಿಹಾರ ನೀಡಲು ಆಗ್ರಹ

ಲಿಂಗಸೂಗೂರ,ಜೂ.೧೭
ತಾಲೂಕಿನ ಸಂತೆಕಲ್ಲೂರ ಕಸಬಾ ಲಿಂಗಸಗೂರ ಬೇಡರ ಕಾರಲಕುಂಟಿ ಗ್ರಾಮದ ರೈತರ ಜಮೀನು ರಸ್ತೆ ಅಗಲೀಕರಣ ಹೆಸರಿನಲ್ಲಿ ರೈತರ ಜಮೀನು ಒತ್ತುವರಿ ಮಾಡಿ ರೈತರಿಗೆ ಪರಿಹಾರ ನೀಡದೆ ಹುನಗುಂದ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಲಿಂಗಸುಗೂರು ತಾಲ್ಲೂಕಿನ ಉಪವಿಭಾಗಾಧಿಕಾರಿ ಸಾಹಾಯಕ ಆಯುಕ್ತರಾದ ಅವಿನಾಶ್ ಸಂಜೀವನ್ ಸಿಂದೆ ಇವರು ರೈತರ ಸಂಕಷ್ಟ ನಿವಾರಿಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರ ಪ್ರತಿಭಟನೆ ನಮ್ಮ ಜಮೀನುಗಳಿಗೆ ಪರಿಹಾರ ನೀಡದೆ ಇದ್ದರೆ ನಿಮ್ಮ ಕಂದಾಯ ಇಲಾಖೆ ಹಾಗೂ ಹುನಗುಂದ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ ಇಲ್ಲಾಂದ್ರೆ ವಿಷ ಕೊಡಿ ಎಂದು ರೈತರು ಪಟ್ಟು ಹಿಡಿದರು.
ರೈತರ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾಡಳಿತ ಗಮನಕ್ಕೆ ತಂದು ನಿಮಗೆ ಪರಿಹಾರ ಕೊಡಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಲಾಗುತ್ತದೆ ಎಂದು ಸಾಹಾಯಕ ಆಯುಕ್ತರು ಭರವಸೆ ನೀಡಿದರು.
ಜೇವರ್ಗಿಯಿಂದ ಚಾಮರಾಜನಗರ ಎನ್ ಹೆಚ್ ೧೫೦ ಎ ರಸ್ತೆ ಅಗಲೀಕರಣಕ್ಕೆ ಹಾದು ಹೋಗುವ ರಸ್ತೆಗ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕೆ೦ದು ರಾಜ್ಯ ಹೆದ್ದಾರಿ ಪ್ರಾಧಿಕಾರ ಕಾರ್ಯನಿರ್ವಹಕ ಇಂಜಿನಿಯರ್ ಇವರಿಗೆ ಮನವಿ ಸಲ್ಲಿಸಿದರು.
ಲಿಂಗಸುಗೂರು ತಾಲೂಕಿನ ಸಂತೆಕೇಲ್ಲೂರು ಗ್ರಾಮದಲ್ಲಿ ರೈತರ ಜಮೀನುಗಳಿಗೆ ಹಾದುಹೋಗುವ ಎನ್.ಹೆಚ್.೧೫೦ಎ, ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ನಡೆದದ್ದು, ಸ೦ಬ೦ಧ ಪಟ್ಟ ಅಧಿಕಾರಿಗಳು ಈ ರಸ್ತೆಗೆ ಹೊಂದಿ ಕೊಂಡಿರುವ ಜಮೀನಿನ ರೈತರಿಗೆ ಯಾವುದೇ ನೋಟಿಸು ಹಾಗೂ ಮಾಹಿತಿ ನೀಡದೇ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಟೆಂಡರ ಮಾಡಿ ಕೆಲಸ ಪ್ರಾರ೦ಭ ಮಾಡಿದ್ದಾರೆ. ಕಾರಣ ಅರ್ಧದಷ್ಟು ಜಮೀನು ಕಳೆದುಕೊ೦ಡ ರೈತರು ಸ೦ಕಷ್ಟದಲ್ಲಿದ್ದಾರೆ, ಈ ಕೂಡಲೇ ನಡೆಯುತ್ತಿರುವ ಎನ್. ಹೆಚ್, ರಸ್ತೆ ಕಾಮಗಾರಿಯನ್ನು ತಡೆಯ ಬೇಕು ಹಾಗೂ ಈ ಕಾಮಗಾರಿಯ ಸರಕಾರದ ಗೆಜೆಟ್ ನೋಟಿಫಿಕೇಷನ್ ೬(೧)೪ (೧) ಈ ಸೆಕ್ಷನ್ ರೈತರಿಗೆ ನೀಡಬೇಕು, ರೈತರಿಗೆ ನ್ಯಾಯ ಕೊಡಿಸಿ ಪರಿಹಾರ ನೀಡಬೇಕು ಎಂದು ಸುಮಾರು ದಿನಗಳಿಂದ ಹೋರಾಟದ ಸ್ಥಳದಲ್ಲಿರುವ ರೈತರಿಗೆ ಬೇಟಿಯಾದ ಸಹಾಯಕ ಆಯುಕ್ತರು ಸಿಂದೆ ಅವಿನಾಶ್ ಸಂಜೀವನ್ ಹಾಗೂ ಸಂಬಂದಪಟ್ಟ ಅಧಿಕಾರಿಗಳು ಸರ್ಕಾರದ ನಿಯಮಗಳ ಬಗ್ಗೆ ರೈತರಿಗೆ ತಿಳಿಸಿದರು.
ಆದರೂ ಪಟ್ಟು ಬಿಡದ ರೈತರು ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದಾಗ, ಜ ೨೧ ತಾರೀಕಿನೊಳಗೆ ಪರಿಹಾರ ನೀಡುವ ಭರವಸೆ ನೀಡಲಾಯಿತು.ಕಾಮಗಾರಿಯನ್ನು ಬಂದ್ ಮಾಡಿ ರೈತ ಜಮೀನುಗೆ ಸರ್ಕಾರದಿಂದ ಜಮೀನು ಕೊಡಿಸಿ ಇಲ್ಲವಾದಲ್ಲಿ ನಮಗೆ ಎನ್.ಹೆಚ್ ರಸ್ತೆ ಬಂದ್ ಮಾಡಿ ಎಂದು ದಲಿತ ಬಡಕುಟು೦ಬ ವರ್ಗದವರಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗಿರುತ್ತದೆ.
ಎಸ್.ಹೆಚ್. ಕಂಪನಿ ಗುತ್ತಿದಾರಗೆ ಸೂಕ್ತ ಮಾಹಿತಿ ಯಾವುದೇ ಪರಿಹಾರಕ್ಕೆ ತಮಗೆ ಎನ್.ಹೆಚ್ ೧೫೦ ಎ ರಸ್ತೆ ಕಾಮಗಾರಿ ತಡೆಯಬೇಕು. ರೈತರ ಜಮೀನಿಗೆ ನ್ಯಾಯ ದೊರಕಿಸುವವರಿಗೆ ರಸ್ತೆ ಕಾಮಗಾರಿಯನ್ನು ಬ೦ದಾಡಿ ನೊಂದ ರೈತರಿಗೆ ಪರಿಹಾರ ದೊರಕಿಸಿಕೊಡಬೇಕೆಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೆಚ್.ಬಿ ಮುರಾರಿ, ಸಮತವಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ ಸಂತೆಕೆಲ್ಲೂರು, ದಸಂಸ ವಿದ್ಯಾರ್ಥಿ ಘಟಕ ಜಿಲ್ಲಾ ಅಧ್ಯಕ್ಷ ಯಲ್ಲಾಲಿಂಗ ಕುಣೆಕಲ್ಲೂರು, ಕೆಆರ್‌ಪಿ ನೀರುಪಾದಿ ಗೋಮರ್ಶಿ, ವಿಜಯ ಪೋಳ, ರೈತ ಹೀತರಕ್ಷಣಾ ಸಮಿತಿ ಅಧ್ಯಕ್ಷರು ಚ೦ದ್ರ ರೆಡ್ಡಿ ದೇಸಾಯಿ, ಉಪಾಧ್ಯಕ್ಷರು ಈಶಪ್ಪಗೌಡ, ಸಂಗಮೇಶ ಅಂಗಡಿ, ಮಹೇಂದ್ರಗೌಡ ಉಪಾಧ್ಯಕ್ಷರು ಹಾಗೂ ನೂರಾರು ರೈತರು ಇದ್ದರು.