ರೈತರಿಗೆ ಪರಿಹಾರ ಒದಗಿಸಲು ಒತ್ತಾಯ

ಕಾರಟಗಿ ಮೇ 04 : ಕಾರಟಗಿ ತಾಲೂಕಿನ್ಯಾದ್ಯಂತ ಇತ್ತೀಚಿಗೆ ಸುರಿದ ಅಲಿಕಲ್ಲ ಮಳೆಯಿಂದಾಗಿ ರೈತರ ಬತ್ತದ ಗದ್ದೆಗಳು ನಾಶವಾಗಿದ್ದು ರೈತರಿಗೆ ಪರಿಹಾರ ದೊರೆಕಿಸಿ ಕೊಡಬೇಕೆಂದು ಶಾಸಕರಿಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಈ ಆನಂದ್ ಬಾಬು ಒತ್ತಾಯಿಸಿದ್ದಾರೆ,
ಪಟ್ಟಣದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೋವಿಡ್-19 ನಿಂದಾಗಿ ಜನರು ಕೆಲಸ ವಿಲ್ಲದೆ ತತ್ತರಿಸಿದ್ದಾರೆ,
ಕಾರಟಗಿ ತಾಲೂಕಿನದ್ಯಾಂತ ರೈತರು ಕಷ್ಟ ಪಟ್ಟು ಬೆಳದ ಬತ್ತದ ಬೆಳೆ ರೈತರ ಕೈಗೆ ಸೇರುವು ಹೊತ್ತಲ್ಲಿ ಇತ್ತೀಚಿಗೆ ಸುರಿದ ಅಲಿಕಲ್ಲ ಮಳೆಯಿಂದಾಗಿ ಬತ್ತದ ಬೆಳೆಗಳು ನಾಶವಾಗಿದೆ,
ಮಾನ್ಯ ಶಾಸಕರು ಸರಕಾರದ ಗಮನಕ್ಕೆ ತಂದು ಸಂಕಷ್ಟದಲ್ಲಿರುವ ರೈತರಿಗೆ ಎಕರಿಗೆ 30 ಸಾವಿರದಿಂದ 40 ಸಾವಿರ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ,
ಶಾಸಕರು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತರ ಬಗ್ಗೆ ಬೇಜವಾಬ್ದಾರಿ ತೋರಿಸದೆ ಕಾಳಜಿ ವಹಿಸಿ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದು ಅವರು ತಿಳಿಸಿದರು,
ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಮಹಮದ್ ಅಲೀಷಾ ಇನ್ನಿತರ ಜೆಡಿಎಸ್ ಕಾರ್ಯಕರ್ತರು ಇದ್ದರು,