ರೈತರಿಗೆ ಪಟ್ಟಾ ವಿತರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.23: ತಹಶೀಲ್ದಾರರ ಕಚೇರಿಯಲ್ಲಿ ಗುರುವಾರ ನಡೆದ ಇನಾಂ ರೈತವಾರಿ ಪಟ್ಟಾ ನಮೂನೆ-೨ ವಿತರಣೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಹೇಮಂತ್, ತಹಶೀಲ್ದಾರ ಎನ್ ಆರ್ ಮಂಜುನಾಥಸ್ವಾಮಿ ಅರ್ಹ ರೈತರಿಗೆ ಪಟ್ಟಾ ವಿತರಣೆ ಮಾಡಿದರು.
ತಾಲ್ಲೂಕಿನ ತೆಕ್ಕಲಕೋಟೆ 106 ರೈತರಿಗೆ, ಹಾವಿನಹಾಳು ಗ್ರಾಮದ‌ 06 ರೈತರಿಗೆ, ಉತ್ತನೂರು 15 ರೈತರಿಗೆ,
ಶಾನವಾಸಪುರ 06 ರೈತರಿಗೆ, ಕೆ.ಬೆಳಗಲ್ಲಿನ 18 ರೈತರಿಗೆ, ತಾಳೂರು 44 ರೈತರಿಗೆ ಪಟ್ಟಾ ವಿತರಣೆಯನ್ನು ಸ್ವೀಕರಿಸಿದರು.