ರೈತರಿಗೆ ತೊಂದರೆಯಾಗದಂತೆ ಸಿದ್ಧತೆ

ಲಕ್ಷ್ಮೇಶ್ವರ, ಜೂ4: ಗದಗ ಜಿಲ್ಲೆಯಲ್ಲಿ ರೈತರಿಗೆ ಬೇಕಾಗಿರುವ ಬೀಜ, ಗೊಬ್ಬರ ದಾಸ್ತಾನು ಸಾಕಷ್ಟಿದ್ದು ರೈತರಿಗೆ ತೊಂದರೆಯಾಗದಂತೆ ಇಲಾಖೆ ಮುಂಚಿತವಾಗಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರುದ್ರೇಶ್ ಟಿ.ಎಸ್ ಹೇಳಿದರು.
ಅವರು ನಿನ್ನೆ ಪಟ್ಟಣದ ವಿವಿಧ ಗೊಬ್ಬರ ,ಬೀಜ ಮಾರಾಟ ಮಳಿಗೆಗಳಿಗೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲೆಯ ಮತ್ತು ತಾಲೂಕಿನ ರೈತರಿಗಾಗಿಯೇ ಗೊಬ್ಬರ, ಬೀಜ ನೀಡಲಾಗುತ್ತಿದ್ದು ಅನ್ಯ ಜಿಲ್ಲೆಗಳ, ತಾಲೂಕುಗಳ ರೈತರಿಗೆ ನೀಡಿದಂತೆ ತಾಕೀತು ಮಾಡಿದರಲ್ಲದೆ ಯಾವುದೇ ಕಾರಣಕ್ಕೂ ಗೊಬ್ಬರದ ಹಾಹಾಕಾರ ಆಗದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಮಹೇಶ್ ಬಾಬು, ಕೃಷಿ ಅಧಿಕಾರಿಗಳಾದ ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ಅಧಿಕಾರಿ ಎಮ್.ಹೆಚ್. ಹಣಗಿ ಇದ್ದರು.