ರೈತರಿಗೆ ಜಲಾನಯನ ಮಾದರಿ ಮಾಹಿತಿ

ಹುಳಿಯಾರು, ಜು. ೨೮- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹುಳಿಯಾರು ವಲಯದ ಕುರಿಹಟ್ಟಿ ಬಿ. ಕಾರ್ಯಕ್ಷೇತ್ರದ ಸೋಮಜ್ಜನಪಾಳ್ಯದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಡಿ ಜಲಾನಯನ ಮಾದರಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಹಿರಿಯ ಕೃಷಿ ವಿಜ್ಞಾನಿ ನಾಗಪ್ಪ ದೇಸಾಯಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆ ಹಾಗೂ ಸಿಎಸ್‌ಸಿ ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಸುಮಲತಾ, ಪಟ್ಟಣ ಪಂಚಾಯಿತಿ ಸದಸ್ಯ ಎಸ್‌ಆರೆಸ್ ದಯಾನಂದ್, ಕೃಷಿ ಮೇಲ್ವಿಚಾರಕ ಯೋಗೀಶ್, ವಲಯದ ಮೇಲ್ವಿಚಾರಕಿ ಚೈತ್ರ, ಸೇವಾಪ್ರತಿನಿಧಿ ನಾಗರತ್ನ, ವಿಎಲ್‌ಇ ಸಿಬ್ಬಂದಿ ಪಂಕಜ ಮತ್ತಿತರರು ಉಪಸ್ಥಿತರಿದ್ದರು.