ರೈತರಿಗೆ ಚಿಂತೆಗಿಡು ಮಾಡಿದ ಮಳೆರಾಯ

ಚಿತ್ತಾಪೂರ: ಜು.14:ತಾಲ್ಲೂಕಿನಲ್ಲಿ ಆರು-ಏಳು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹೊಲಗಳಿಗೆ ನೀರು ನುಗ್ಗಿದೆ ಇದರಿಂದ ರೈತರಿಗೆ ಚಿಂತೆಗಿಡು ಮಾಡಿದೆ.

ರೈತರು ಈಗಾಗಲೇ ತಮ್ಮ ಹೊಲದಲ್ಲಿ ಹೆಸರು, ಊದ್ದು, ತೊಗರಿ, ಇನ್ನು ಕೆಲಕಡೆ ಹತ್ತಿ ಬೆಳೆದಿದ್ದಾರೆ.

ಚಿತ್ತಾಪೂರ ಪಟ್ಟಣದ ಹೊಲಗಳು ಸೇರಿದಂತೆ ತಾಲ್ಲೂಕಿನ ಗ್ರಾಮಗಳಾದ ಯರಗಲ್, ಕದ್ದರ್ಗಿ, ಭಾಗೋಡಿ, ಮುಡಬೂಳ, ಮರಗೋಳ, ರಾವೂರ, ಮಾಲಗತ್ತಿ, ಜೀವಣಗಿ, ಮುತ್ತಗಾ, ದಂಡೋತಿಯ ಹೊಲಗಳಲ್ಲಿ ಮಳೆ ನೀರು ನುಗ್ಗಿವೆ. ಇನ್ನು ನಾಲ್ಕು ದಿನಗಳು ಮಳೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರಿಂದ ರೈತರಿಗೆ ತಾವು ಬೆಳೆದ ಬೆಳೆಯಿಂದ ಫಸಲು ಸಿಗುತ್ತಾ ಇಲ್ಲ ಅಂತ ಮತ್ತಷ್ಟು ಚಿಂತೆಗಿಡು ಮಾಡಿದೆ.