ರೈತರಿಗೆ ಗೌರವ ನೀಡಿ -ಕಲಘಟಗಿ


ಲಕ್ಷ್ಮೇಶ್ವರ,ಡಿ.24- ‘ಜನತೆಗೆ ಅನ್ನ ಬೆಳೆಯುವ ರೈತನೇ ದೇಶದ ಬೆನ್ನೆಲುಗು ಇದ್ದಂತೆ. ಅವನು ಬೆಳೆಯದಿದ್ದರೆ ನಾವೆಲ್ಲ ಉಪವಾಸ ಇರಬೇಕಾಗುತ್ತದೆ. ಕಾರಣ ರೈತನಿಗೆ ಗೌರವ ನೀಡುವುದು ನಮ್ಮೆಲ್ಲ ಕರ್ತವ್ಯ’ ಎಂದು ಕನ್ನಡ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.
ರೈತ ದಿನದ ಅಂಗವಾಗಿ ಪಟ್ಟಣದ ನಿಂಗಪ್ಪ ಮಾಡಳ್ಳಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು
‘ಇಂದು ರೈತರು ವಿವಿಧ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿದ್ದಾರೆ. ಕಷ್ಟಪಟ್ಟು ಬೆಳೆ ಬೆಳದರೆ ಅವರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಹೀಗಾಗಿ ಬಹಳಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಭವಿಷ್ಯದಲ್ಲಿ ಅನ್ನದ ಸಮಸ್ಯೆ ಕಾಡಲಿದೆ’ ಎಂದರು.
ಈ ಸಂದರ್ಭದಲ್ಲಿ ಇಲಿಯಾಸ್ ಮೀರಾನವರ, ಸಾಹಿಬ್‍ಲಾಲ್ ಕಲೇಗಾರ, ಗೌಸುಮೋದಿನ್ ಒಂಟಿ, ಇಸಾಕ್ ಮೋಮಿನ್ ಇದ್ದರು.
**