ರೈತರಿಗೆ ಗೊಬ್ಬರ ವಿತರಣೆ

ಲಕ್ಷ್ಮೇಶ್ವರ, ಜು 15: ಕಳೆದ 13 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಸೋನೆ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತಿದೆ.
ವಿಪರೀತವಾದ ತೇವಾಂಶದಿಂದಾಗಿ ಬೆಳೆಗಳು ರೋಗಗಳಿಗೆ ಬಲಿಯಾಗುತ್ತಿದ್ದು ತೇವಾಂಶವನ್ನು ತಡೆಗಟ್ಟಲು ರೈತರು ಡಿಎಪಿ ಮತ್ತು ಯುರಿಯಾ ಗೊಬ್ಬರಗಳಿಗೆ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಟಿಎಪಿಸಿಎಂಎಸ್ ನವರು ರೈತರ ಅನುಕೂಲಕ್ಕಾಗಿ ಗೊಬ್ಬರ ವಿತರಿಸಲು ಮುಂದಾಗುತ್ತಿದ್ದಂತೆಯೇ ಗುರುವಾರ ಮುಂಜಾನೆಯೇ ನೂರಾರು ಗಟ್ಟಲೆ ರೈತರು ಅವಶ್ಯಕ ದಾಖಲೆಗಳೊಂದಿಗೆ ಟಿಎಪಿಸಿಎಂಎಸ್ ಮುಂದೆ ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿತು.
ಗೊಬ್ಬರ ವಿತರಣೆಯ ಸಂದರ್ಭದಲ್ಲಿ ಯಾವುದೇ ನೂಕು ನೂಗಲು ಉಂಟಾಗದಂತೆ ಮುಂಜಾಗೃತ ಕ್ರಮವಾಗಿ ಪೆÇಲೀಸ್ ಬಂದೋಬಸ್ತ್‍ನಲ್ಲಿ ರೈತರಿಗೆ ಗೊಬ್ಬರಗಳನ್ನು ವಿತರಿಸಲಾಯಿತು.
ಈ ಕುರಿತು ಟಿಎಪಿಸಿಎಂಎಸ್ ಅಧ್ಯಕ್ಷರಾದ ಗದಿಗೆಪ್ಪ ಯತ್ನಳ್ಳಿಯವರು ರೈತರ ಅನುಕೂಲಕ್ಕಾಗಿ ಸಂಘವು ಗೊಬ್ಬರವನ್ನು ವಿತರಿಸುತ್ತಿದ್ದು ರೈತರು ಶಾಂತ ರೀತಿಯಿಂದ ಸಹಕರಿಸಿ ಗೊಬ್ಬರ ಪಡೆಯಬೇಕೆಂದು ಮನವಿ ಮಾಡಿದರು.