ರೈತರಿಗೆ ಕೆಲಸ ಕೊಡಲು ಆಗ್ರಹಿಸಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು25: ಗಣಿಬೈಲ ಟೋಲನಲ್ಲಿ ಭೂಮಿಕಳೆದುಕೊಂಡ ರೈತರಿಗೆ ಕೆಲಸ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ ಖಾನಾಪೂರ ತಾಲೂಕಾಧ್ಯಕ್ಷ ರಾಜು ಖಾತೆದಾರ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ-ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಹಲವಾರು ರೈತರು ಫಲವತ್ತಾದ ಭೂಮಿಯನ್ನು ಕಳೆದುಕೊಂಡಿದ್ದು ಅಂಥವರ ಮಕ್ಕಳಿಗೆ ಟೋಲನಲ್ಲಿ ಉದ್ಯೋಗ ಕೊಡುವಂತೆ ಟೋಲ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಲಾಗಿತ್ತು. ಅದಕ್ಕೆ ಕ್ಯಾರೆ ಎನ್ನದ ಟೋಲ ಸಂಗ್ರಹವನ್ನು ಆರಂಭಿಸಿದ್ದನ್ನು ಖಂಡಿಸಿ ಗಡಿನಾಡು ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಟೋಲ ಸಿಬ್ಬಂದಿ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸಿಬ್ಬಂದಿಯವರು ರೈತರ ಮಕ್ಕಳನ್ನು ನೇಮಿಸಿಕೊಳ್ಳುವ ಭರವಸೆ ನೀಡಿದರು. ನಂತರ ಪ್ರತಿಭಟ£್ನು ಕೈಬಿಡಲಾಯಿತು.