ರೈತರಿಗೆ ಕಿಸಾನ್ ಸಮ್ಮಾನ್ ಪರಿಹಾರ ಸ್ಥಗಿತಗೊಳಿಸದಿರಲು ಆಗ್ರಹ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು18: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ರೂ.4 ಸಾವಿರ ಪರಿ ಹಾರದ ಹಣವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಕೂಡಲೇ ಯೋಜನೆ ಪುನರಾರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಯಯ್ಯ ಬಣ) ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ರೈತರಿಗೆ ರೂ.6 ಸಾವಿರ ಹಾಗೂ ರಾಜ್ಯ ಸರ್ಕಾರ ರೂ.4 ಸಾವಿರ ನೀಡುತ್ತಿತ್ತು, ಆದರೆ ಪ್ರಸ್ತುತ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸದರಿ ಯೋಜನೆಯನ್ನು ಹಿಂಪಡೆದಿರುವುದು ದುರದೃಷ್ಟಕರ, ಇಂತಹ ರೈತ ವಿರೋಧಿ ನಿರ್ಣಯಗಳನ್ನು ಕೂಡಲೇ ಕೈಬಿಡಬೇಕು ಮತ್ತು ಎಂದಿನಂತೆ ರೈತರಿಗೆ ರೂ.4 ಸಾವಿರ ನೀ ಡುವಂತೆ ಆಗ್ರಹಿಸಿದರು.
ಕೂಡಲೇ ಕೆರೆಗಳಿಗೆ ನೀರು ಹರಿಸಿ:ಮುಖಂಡ ಗಂಗಣ್ಣ ಎಲಿ ಮಾತನಾಡಿ, ಪ್ರಸ್ತುತ ಕೃಷಿ ವರ್ಷದಲ್ಲಿ ತಾಲೂಕಿನಲ್ಲಿ ಮು ಂಗಾರು ತೀವ್ರ ದುರ್ಬಲಗೊಂಡಿದ್ದು ತಾಲೂಕಾದ್ಯಂತ ಯಾವುದೇ ಬೆಳೆಗಳನ್ನು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಬಹು ನಿರೀಕ್ಷಿತ ಏತ ನೀರಾವರಿ ಯೋಜನೆಗಳನ್ನು ಆರಂಭಿಸಿ ಕೂಡಲೇ ಎಲ್ಲಾ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸು ವಂತೆ ಆಗ್ರಹಿಸಿದರು.
ಬೆಳೆನಾಶಕ್ಕೆ ಪರಿಹಾರ ಕೊಡಿ: ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ಸಮರ್ಪಕ ಮಳೆಯಿಲ್ಲದೇ ಕೆರೆ ಗಳು ಬತ್ತಿಹೋಗಿವೆ ಇನ್ನೂ ಕೊಳವೆಭಾವಿಗಳಲ್ಲಿ ನೀರಿಲ್ಲದೇ ಕಬ್ಬು, ಅಡಿಕೆ ಇನ್ನಿತರ ದೀರ್ಘಾವಧಿ ಬೆಳೆಯನ್ನು ರೈತರು ನಾಶಪಡಿಸುತ್ತಿದ್ದಾರೆ, ಇಷ್ಟಾದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ ಜಿಲ್ಲಾಡಳಿತ ಮತ್ತು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ವಿದ್ಯುತ್ ತಂತಿಗಳನ್ನು ಸರಿಪಡಿಸಿ:ಉಪಾಧ್ಯಕ್ಷ ಮಲ್ಲೇಶಪ್ಪ ಡಂಬಳ ಮಾತನಾಡಿ, ತಾಲೂಕಿನ ಬಹುತೇಕ ಕೃಷಿ ಭೂಮಿಗ ಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿದ್ಯುತ್ ತಂತಿ ಹಾಯ್ದು ಹೋಗಿದ್ದು ಮಳೆಗಾಲದಲ್ಲಿ ರೈತರು ಜೀವಭಯದಿಂದ ಕೃಷಿ ನಡೆಸುವಂತಾಗಿದೆ ಕೂಡಲೇ ಅಂತಹವುಗಳನು ಸರ್ವೇ ಮಾಡಿಸಿ ಸರಿಪಡಿಸಬೇಕು, ಅಕ್ರಮ-ಸಕ್ರಮ ಯೋಜನೆಯಡಿ ಹೆಸ್ಕಾಂ ಕಳೆದ ಮೂರು ವರ್ಷದಿಂದ ವಿದ್ಯುತ್ ಪರಿಕರಗಳನ್ನು ಒದಗಿಸಿಲ್ಲ, ಕೂಡಲೇ ಹೆಸ್ಕಾಂ ಮೂಲಕ ವಿದ್ಯುತ್ ಪರಿಕರಗಳನ್ನು ರೈತರಿಗೆ ಒದಗಿಸುವಂತೆ ಆಗ್ರಹಿಸಿದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್:ಚಿಕ್ಕಪ್ಪ ಛತ್ರದ ಮಾತನಾಡಿ, ಹಾವೇರಿ ಜಿಲ್ಲೆ ರಚನೆಯಾಗಿ 25 ವರ್ಷಗಳು ಕಳೆದರೂ ಸಹ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ರಚನೆಯಾಗಿಲ್ಲ, ಇದರಿಂದ ಜಿಲ್ಲೆಯ ರೈತರು ಶೂನ್ಯ ದರದಲ್ಲಿ ರೂ.5 ಲಕ್ಷ ಸಾಲ ಯೋಜನೆ ವ್ಯಾಪ್ತಗೆ ಒಳಪಡದಂತಾಗಿದ್ದು ಸದರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಹೀಗಾಗಿ ಜಿಲ್ಲೆಗೆ ಪ್ತತ್ಯೇ ಡಿಸಿಸಿ ಬ್ಯಾಂಕ್ ಅನುಷ್ಟಾನಗೊಳಿಸುವಂತೆ ಆಗ್ರಹಿಸಿದರು.
ಬೇಡಿಕೆಗಳು:ಕಳೆದ ವರ್ಷ ಅತೀವೃಷ್ಠಿಯಿಂದ ಹಾನಿಯಾದ ಬೆಳೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು, ಹವಮಾನ ಆಧಾರಿತ ಬೆಳೆವಿಮೆಯಿಂದ ವಂಚಿತರಾದ ರೈತರಿಗೆ ಶೀಘ್ರ ಪರಿಹಾರ, ಉದ್ಯೋಗ ಖಾತರಿ ಯೋಜನೆಯಡಿ ಸಸಿಗಳ ಬಿಲ್ ಬಾಕಿ ಹಣ ಬಿಡುಗಡೆ, ಬ್ಯಾಂಕಗಳಲ್ಲಿ ಓಟಿಎಸ್ ಮೂಲಕ ಸಾಲ ತೀರಿಸಿದ ರೈತರಿಗೆ ಸಿಬಿಲ್‍ನಿಂದ ಬೇರ್ಪಡಿಸಿ ಮರುಸಾಲ ವಿತರಣೆ, ನಿಯಮದಂತೆ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಶೀಘ್ರ ಅಗಲೀಕರಣ, ಕಾಡು ಪ್ರಾಣಿಗಳಿಂದ ಬೆಳೆನ?À್ಟವಾದರೆ ಪ್ರತಿ ಎಕರೆಗೆ ರೂ.10 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿದರು.
ಈ ವೇಳೆಯಲ್ಲಿ ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಕೆ.ವಿ.ದೊಡ್ಡಗೌಡ್ರ, ಶೇಖಪ್ಪ ಕಾಶಿ, ಕರಬಸಪ್ಪ ಶಿರಗಂಬಿ, ಮೌನೇಶ ಕಮ್ಮಾರ, ಹನುಮಂತಪ್ಪ ಕೆಂಗೊಂಡ, ಶಿವರುದ್ರಪ್ಪ ಮೂಡೇರ, ಎನ್.ಎಂ.ಅರಳೀಕಟ್ಟಿ, ವೀರಬಸನಗೌಡ ದಳ ವಾಯಿ, ಎಸ್.ಎನ್.ಮತ್ತೂರ ಶಂಕರ ಮರಗಲ್ಲ, ಫಕ್ಕೀರಪ್ಪ ಅಜಗೊಂಡರ ಸೇರಿದಂತೆ ನೂರಾರು ರೈತರಿದ್ದರು.