ರೈತರಿಗೆ ಒಳ್ಳೆಯ ಗುಣಮಟ್ಟವಾಗಿರುವ ಬೀಜಗಳು ಸಿಗಬೇಕುಃ ವಿಜುಗೌಡ ಪಾಟೀಲ್

ವಿಜಯಪುರ, ಜ.1-ಬಬಲೇಶ್ವರ ಮತಕ್ಷೇತ್ರದ ತಿಕೋಟಾ ರೈತ ಸಂಪರ್ಕ ಕೇಂದ್ರಕ್ಕೆ ಕರ್ನಾಟಕ ರಾಜ್ಯದ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರು ಆದ ವಿಜುಗೌಡ ಎಸ್. ಪಾಟೀಲ್ ಇವರು ಭೇಟಿ ನೀಡಿ ರೈತರಿಗೆ ಒಳ್ಳೆಯ ಗುಣಮಟ್ಟವಾಗಿರುವ ಬೀಜಗಳು ಸಿಗಬೇಕು ಮತ್ತು ಯಾವ ರೈತರಿಗೂ ಕೂಡಾ
ಅನ್ಯಾಯವಾಗಬಾರದು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ವಿವಿಧ ಗ್ರಾಮ ಪಂಚಾಯತಗಳಲ್ಲಿ ನಡೆದ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿ, ಇವರ ಗೆಲವುಗೆ ಹಗಲಿರಳು ಶ್ರಮಿಸಿದ ಎಲ್ಲ ಮತದಾರರಿಗೂ, ಕಾರ್ಯಕರ್ತರಿಗು, ಪದಾದಿಕಾರಿಗಳಿಗೂ ಹಾಗೂ ಮುಖಂಡರಿಗೆ ಧನ್ಯವಾದ ಅರ್ಪಿಸಿದರು.