ರೈತರಿಗೆ ಊಟ ಬಡಿಸಿದ ದಿವಾಕರ ಬಾಬು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.03: ಮಾನ ಸಚಿವ ಎಂ.ದಿವಾಕರಬಾಬು ಅವರು ಇಂದು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ವರ್ತಕರ ಸಂಘ ಮತ್ತು ಎಪಿಎಂಸಿ ಇವರಿಂದ  ನಡೆಸುತ್ತಿರುವ ರೈತಣ್ಣನ ಊಟದಲ್ಲಿ ಪಾಲ್ಗೊಂಡು ರೈತರಿಗೆ ಊಟ ಬಡಿಸಿದರಲ್ಲದೆ. ತಾವು ಊಟ ಸವಿದು ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೇರೆ ಊರುಗಳಿಂದ ಮಾರುಕಟ್ಟೆಗೆ ಬರುವ ರೈತರಿಗೆ ಈ ರೀತಿ ಉಚಿತವಾಗಿ‌ ಊಟದ ವ್ಯವಸ್ಥೆ ಮಾಡುತ್ತಿರುವ   ಚೇಂಬರ್ ಆಫ್ ಕಾಮರ್ಸ್ನ ಕಾರ್ಯ ಶ್ಲಾಘನಿಯವಾದುದು.
ನಾನು ಸಹ ಪ್ರತಿ ವರ್ಷದ ಒಂದು ದಿನ ರೈತರಿಗೆ  ಊಟವನ್ನು ಬಡಿಸಲು ನಿರ್ಧರಿಸಿರುವುದಾಗಿ ಈ ವೇಳೆ  ತಿಳಿಸಿದರು.
ಈ ಸಂದರ್ಭದಲ್ಲಿ ಚೇಂಬರ್ ಅಧ್ಯಕ್ಷ ಶ್ರೀನಿವಾಸ್ ರಾವ್, ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ, ಮಹಾರುದ್ರಗೌಡ, ‌ಕೆ.ಸಿ.ರಮೇಶ್ ಮೊದಲಾದವರು ಇದ್ದರು.