ತಾಳಿಕೋಟೆ:ಜೂ.8: ರೈತರಿಗೆ ಮುಂಗಾರು ಹಂಗಾಮಿಗಾಗಿ ಕೃಷಿ ಇಲಾಖೆಯಿಂದ ನೀಡಲಾಗುತ್ತಿರುವ ಬೀಜಗಳು ಉತ್ತಮ ಗುಣಮಟ್ಟದಿಂದ ಕೂಡಿದ ಬೀಜಗಳು ವಿತರಣೆಯಾಗಲಿವೆ ಈಗಾಗಲೇ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಬೀಜ ದಾಸ್ತಾನು ಮಾಡಿಕೊಳ್ಳಲು ಸೂಚಿಸಿದ್ದೇನೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಹೇಳಿದರು.
ಬುಧವಾರರಂದು ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ಕೃಷಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ 2023-24ನೇ ಸಾಲಿನ ತಾಳಿಕೋಟೆ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿ ರೈತರಿಗೆ ಬೀಜ ಮತ್ತು ಪರಿಕರಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು ಈಗಾಗಲೇ ಕೃಷಿ ಇಲಾಖೆಗೆ ತೋಗರಿ ಬೀಜ ಮತ್ತು ಹೆಸರು, ಸಜ್ಜಿ ಒಳಗೊಂಡಂತೆ ಇನ್ನಿತರ ಬೀಜಗಳು ಬಂದಿವೆ ಯಾವುದೇ ರೈತರಿಗೂ ತೊಂದರೆಯಾಗದ ರೀತಿಯಲ್ಲಿ ವಿತರಣೆ ಮಾಡಲು ಸೂಚಿಸಿದ್ದೇನೆ ಮತ್ತು ಈ ಭಾಗದಲ್ಲಿ ಸೂರ್ಯಕಾಂತಿ, ಮೇಕ್ಕೆಜೋಳ, ಹತ್ತಿ ಬಿತ್ತುವ ಕ್ಷೇತ್ರಗಳು ಇರುವದರಿಂದ ಕೂಡಲೇ ಆ ಬೀಜಗಳನ್ನೂ ಕೂಡಾ ಪೂರೈಕೆ ಮಾಡಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಉತ್ತಮ ಗುಣಮಟ್ಟದ ಬೀಜಗಳು ವಿತರಣೆಯಾಗಲಿವೆ ಕೃಷಿ ಪರಿಕರಗಳು ಅರ್ಹ ರೈತರಿಗೆ ಮುಟ್ಟಿಸಲು ಸೂಚಿಸಿದ ಅವರು ಕೇಲವು ಗೊಬ್ಬರ ಅಂಗಡಿಗಳಲ್ಲಿ ಡುಬ್ಲಿಕೇಟ್ ಬೀಜಗಳು ಮತ್ತು ಡುಬ್ಲಿಕೇಟ್ ಔಷಧಗಳು ಪೂರೈಕೆಯಾಗಿದ್ದರ ಬಗ್ಗೆ ಈ ಹಿಂದೆ ಸಾಕಷ್ಟು ಕೇಳಿದ್ದಾಗಿದೆ ಇದರ ಬಗ್ಗೆ ಹೆಚ್ಚಿಗೆ ಗಮನ ವಹಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ರಾಜುಗೌಡ ಅವರು ಬರುವ ದಿನಗಳಲ್ಲಿ ರೈತರಿಗೆ ಒಳ್ಳೆಯ ದಿನಗಳು ಬರಲಿವೆ ನಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವ ರೈತರಿಗೆ ಅನುಭವ ವೆಂಬುದು ಹೆಚ್ಚಿಗೆ ಇರುತ್ತದೆ ಕೃಷಿ ಇಲಾಖೆಯಿಂದ ನೀಡುವ ಸೌಲತ್ತುಗಳನ್ನು ಎಲ್ಲ ರೈತರು ಸದುಪಯೋಗ ಪಡೆದುಕೊಳ್ಳಬೇಕು ಹೊಸ ಹೊಸ ತಂತ್ರಜ್ಞಾನಗಳು ಬಂದಿದ್ದು ಅವುಗಳನ್ನು ಬಳಕೆ ಮಾಡಿಕೊಂಡು ರೈತರು ಉತ್ತಮ ಫಸಲನ್ನು ಪಡೆದುಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿ ಕೃಷಿ ಸಚೀವರ ವಿಶೇಷ ಅಧಿಕಾರಿ ಡಾ.ಎ.ಬಿ.ಪಾಟೀಲ ಅವರು ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಅಲ್ಪಭೂಮಿಯಲ್ಲಿಯೇ ಅಗಾದವಾದ ಬೆಳೆಗಳನ್ನು ಬೆಳೆಯಬಹುದಾಗಿದೆ ಅದರ ಜೊತೆಗೆ ಉತ್ತಮ ರೀತಿಯ ಆದಾಯವನ್ನು ಗಳಿಸಬಹುದಾಗಿದೆ ದೇಶಿಯ ಪದ್ದತಿಯಲ್ಲಿ ಎತ್ತು ಮತ್ತು ಆಕಳುಗಳ ಸೇಗಣಿ ಗೋಬ್ಬರ ವರ್ಷದಿಂದ ವರ್ಷಕ್ಕೆ ಹೆಚ್ಚಿಗೆ ಫಸಲನ್ನು ಕೊಡುತ್ತದೆ ರೈತರು ಮಾಡುವ ಕೆಲಸದಲ್ಲಿಯೇ ಕೆಲವು ಬದಲಾವಣೆಗಳನ್ನು ತಂದುಕೊಳ್ಳಬೇಕಿದೆ ನಾವು ಹಾಕಿದ ಬೆಳೆಗಳಲ್ಲಿ ಮಿಶ್ರತಳಿಯ ಬೆಳೆಗಳನ್ನು ಹೆಚ್ಚಿಗೆ ಬೆಳೆಯಲು ರೂಡಿಸಿಕೊಳ್ಳಬೇಕು ಬೆಳೆಗೆ ತಕ್ಕಂತೆ ಗೊಬ್ಬರವನ್ನು ನೀಡಬೇಕು ಹೆಚ್ಚಿಗೆ ಗೊಬ್ಬರ ನೀಡಿದರೆ ಬೆಳೆ ಹೆಚ್ಚಿಗೆ ಬರುತ್ತದೆ ಎಂಬುದು ಕಲ್ಪನೆಯಿಂದ ಹೊರಬರಬೇಕು ಉತ್ತಮ ಬೆಳೆಗೆ ಅವಶ್ಯಕತೆ ಇರುವ ಗೊಬ್ಬರ ನೀಡುವ ಬಗ್ಗೆ ಕೃಷಿ ಅಧಿಕಾರಿಗಳಿಂದ ಸಕಾಲದಲ್ಲಿ ಮಾಹಿತಿ ಪಡೆದುಕೊಳ್ಳುತ್ತಾ ಸಾಗಬೇಕೆಂದ ಪಾಟೀಲರು ಕೃಷಿಯಲ್ಲಿ ತಂತ್ರಜ್ಞಾನಕ್ಕೆ ಸಂಬಂದಿಸಿ ಅನೇಕ ಪರಿಕರಗಳನ್ನು ಸಬ್ಸೀಡಿ ರೂಪದಲ್ಲಿ ಸರ್ಕಾರವು ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಇನ್ನೋರ್ವ ತಾಲೂಕಾ ಕೃಷಿಕ ಸಮಾಜದ ಉಪಾಧ್ಯಕ್ಷ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿದರು.
ಇದೇ ಸಮಯದಲ್ಲಿ ಕೃಷಿ ಇಲಾಖೆಯಿಂದ ಹಾಗೂ ಕೃಷಿ ಸಚೀವರ ವಿಶೇಷಾಧಿಕಾರಿ ಎ.ಬಿ.ಪಾಟೀಲ, ಮತ್ತು ಇನ್ನಿತರರು ಶಾಸಕ ರಾಜುಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ವಿಜಯಪುರ ಉಪ-ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ಮುದ್ದೇಬಿಹಾಳ ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ, ಮುಖಂಡರಾದ ಮಡುಸಾಹುಕಾರ ಬಿರಾದಾರ, ಚನ್ನಣ್ಣ ದೇಸಾಯಿ, ಸಾಹೇಬಗೌಡ ಪಾಟೀಲ, ಎಂ.ಎಂ.ಪಾಟೀಲ(ಸಾಲವಾಡಗಿ), ತಾಪಂ ಮಾಜಿ ಅಧ್ಯಕ್ಷ ರಾಜುಗೌಡ ಕೊಳೂರ, ಕೃಷಿ ಅಧಿಕಾರಿಗಳಾದ ಎಂ.ಎಚ್.ಬಿಳಗಿ, ಎಸ್.ಬಿ.ಪಾಲ್ಕಿ, ಸಂಗಮೇಶ ಪಾಟೀಲ, ವಿನೋದ ನಾಯಕ, ಕಿರಣ ಬೊಮ್ಮನಹಳ್ಳಿ, ಹಣಮಂತ್ರಾಯ ಕಾಮರಡ್ಡಿ, ಅಮರೇಶ ಅಂಗಡಿ, ರಾಮಣ್ಣ ಹರಿಜನ, ವಿರುಪಾಕ್ಷ ನಂದಿಕೋಲ, ರವಿ ಹೊಸಮನಿ ಮೊದಲಾದವರು ಇದ್ದರು.