ರೈತರಿಂದ ಹಾಲು ಖರೀದಿ; ಪ್ರತಿ ಲೀ. ಎಮ್ಮೆ ಹಾಲಿಗೆ ರೂ.9.20 ಹೆಚ್ಚಳನಾಳೆಯಿಂದಲೇ ಹೊಸ ದರ ಜಾರಿ:ಆರ್.ಕೆ.ಪಾಟೀಲ್

ಕಲಬುರಗಿ,ಜೂ10: ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಉತ್ಪಾದಕರ ಸಹಕಾರಸಂಘಗಳ ಒಕ್ಕೂಟದ ವ್ಯಾಪ್ತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರನ್ನುಪೆÇ್ರೀತ್ಸಾಹಿಸಲು ರೈತರಿಂದ ಖರೀದಿಸಲಾಗುವ ಪ್ರತಿ ಲೀಟರ್ ಎಮ್ಮೆ ಹಾಲಿನ ಖರೀದಿ ದರ ರೂ.9.20ಹೆಚ್ಚಿಸಲಾಗಿದ್ದು, ಇದೇ ಜೂನ್ 11ರಿಂದ ಹೊಸ ದರ ಅನ್ವಯ ಆಗಲಿದೆ ಎಂದು ಕಲಬುರಗಿ-ಬೀದರ್ ಹಾಗೂ ಯಾದಗಿರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಗುಮುಲ್) ಅಧ್ಯಕ್ಷ ಆರ್.ಕೆ. ಪಾಟೀಲ್ ಪ್ರಕಟಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಲೀಟರ್ ಎಮ್ಮೆ ಹಾಲಿನ ಮೇಲೆ ಸದ್ಯ ರೂ.36. 80 ನೀಡಲಾಗುತ್ತಿದ್ದು, ಇನ್ನುಮುಂದೆ ರೂ.46ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪಾವತಿಸಲಾಗುವುದು ಎಂದರು.
ಪ್ರಸ್ತುತ 2,500 ಲೀಟರ್ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿಇದನ್ನು 10 ಸಾವಿರ ಲೀಟರ್‍ವರೆಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ಆಡಳಿತಮಂಡಳಿ ಸಭೆ ತೀರ್ಮಾನಿಸಿದಂತೆ ನಿರಂತರವಾಗಿ ಹಾಲಿನ ಖರೀದಿ ದರ ಹೆಚ್ಚಿಸುತ್ತಾ ಬರಲಾಗಿದೆ
ಎಂದು ಪಾಟೀಲ್ ವಿವರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ 164 ಸಂಘಗಳು, ಬೀದರ ಜಿಲ್ಲೆ-199 ಸಂಘಗಳು ಮತ್ತುಯಾದಗಿರಿ ಜಿಲ್ಲೆಯಲ್ಲಿ 15 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಮಧ್ಯೆ 119 ಮಹಿಳಾಹಾಲು ಉತ್ಪಾದಕರ ಸಂಘಗಳೂ ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಟೇಪ್‍ಯೋಜನೆಯಡಿ ರೂ. 80 ಲಕ್ಷವರೆಗೆ ಬಡ್ಡಿ ರಹಿತ ಸಾಲ ಒದಗಿಸಿ ಹೊಸ ಹೈನು ರಾಸುಖರೀದಿಗೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಕಳೆದ 2018ರಲ್ಲಿ ರೂ. 103. 34 ಕೋಟಿ ವಹಿವಾಟು ಕೈಗೊಳ್ಳುವ ಮೂಲಕ ರೂ. 60.40ಲಕ್ಷ ಲಾಭ ಗಳಿಸಲಾಗಿದೆ. ಅದೇರೀತಿ, 2019-20ರಲ್ಲಿ ರೂ. 102.22 ಕೋಟಿ ವಹಿವಾಟಿನಲ್ಲಿ ರೂ.
14.96 ಲಕ್ಷ ರೂ. ಗಳಿಕೆ, 2020-21ರಲ್ಲಿ 110 ಕೋಟಿ ರೂ. ವಹಿವಾಟಿನಲ್ಲಿ ರೂ.1.82 ಕೋಟಿಲಾಭಾಂಶ ಸಂಗ್ರಹಿಸಲಾಗಿದೆ. 2021ರಲ್ಲಿ 131.79 ಕೋಟಿ ರೂ. ವಹಿವಾಟಿನ ಮೂಲಕ ರೂ.
53.79 ಲಕ್ಷ ಮತ್ತು 2022-23ನೇ ಸಾಲಿನಲ್ಲಿ ರೂ.133 ಕೋಟಿ ವಹಿವಾಟು ಮಾಡುವ ಮೂಲಕರೂ. 48.47 ಲಕ್ಷ ರೂ. ಲಾಭ ಸಂಗ್ರಹಿಸಲಾಗಿದೆ. ಪ್ರಸ್ತುತ 2023ರಲ್ಲಿಯೂ ಒಕ್ಕೂಟಲಾಭದೊಂದಿಗೆ ಮುಂದೆ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಗುಮುಲ್ ನಿರ್ದೇಶಕ ಈರಣ್ಣ ಝಳಕಿ ಇದ್ದರು.