ರೈತರಿಂದ ಭೂ ಕಬಳಿಕೆ ತಡೆಯುವಲ್ಲಿ ಶಾಸಕ, ಸಂಸದರು ವಿಫಲ: ಯಾಕಾಪೂರ

ಚಿಂಚೋಳಿ,ನ.28- ತಾಲ್ಲೂಕಿನ ಶಾಧಿಪೂರ ಹಾಗೂ ಕುಂಚಾವರಂ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮ ಮತ್ತು ತಾಂಡಾಗಳ ರೈತರ ಭೂಮಿ ನೆರೆಯ ತೆಲಂಗಾಣದ ಬಲಿಷ್ಠರು ಕಬಳಿಸುತ್ತಿದ್ದರೂ, ಇದನ್ನು ತಡೆಯುವಲ್ಲಿ ಇಲ್ಲಿನ ಶಾಸಕರು, ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಆರ್ ಯಾಕಾಪೂರ ಅವರು ಆರೋಪಿಸಿದ್ದಾರೆ.
ಈ ಎರಡು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಶಾಧಿಪೂರ, ಚಂದುನಾಯಕ ತಾಂಡ, ಸೇವುನಾಯಕ ತಾಂಡ,ಧನಸಿಂಗ್ ನಾಯಕ ತಾಂಡ, ಬಿಕ್ಕುನಾಯಕ ತಾಂಡ, ಚಾಪ್ಲಾನಾಯಕ ತಾಂಡಗಳ ರೈತರ ಭೂಮಿಯನ್ನು ನೇರೆಯ ತೆಲಂಗಾಣ ರಾಜ್ಯದ ಬಲಿಷ್ಠ ಹಾಗೂ ಪ್ರಭಾವಿ ನಾಯಕರು ಕಬಳಿಕೆ ಮಾಡಿಕೊಳ್ಳುತ್ತಿದ್ದರು ಶಾಸಕರು ಸಂಸದರು ಮಾತ್ರ ಕಣ್ಣುಮಚ್ಚಿ ಕುಳಿತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
ಶಾಧಿಪೂರ ವ್ಯಾಪ್ತಿಯ ಸರ್ವೆ ನಂಬರ್ 126/1ರಲ್ಲಿ 150 ಏಕರೆ ಭೂಮಿಯಲ್ಲಿ 41ರೈತರು ಭೂಮಿ ಕಳೆದುಕೊಂಡಿದ್ದಾರೆ,ಸರ್ವೆ ನಂಬರ್ 126/3ರಲ್ಲಿ 28 ಏಕರೆ ಭೂಮಿಯಲ್ಲಿ 19 ರೈತರು ಭೂಮಿ ಕಳೆದುಕೊಂಡಿದ್ದಾರೆ,ಸರ್ವೇ ನಂಬರ್ 127/3ರಲ್ಲಿ 10 ಏಕರೆ ಭೂಮಿಯಲ್ಲಿ 3ಜನ ರೈತರು ಭೂಮಿ ಕಳೆದುಕೊಂಡಿದ್ದಾರೆ, ಶಾಧಿಪೂರ ಗಡಿಭಾಗದ ಒಟ್ಟಾರೆ ಕರ್ನಾಟಕ ರೈತರ ಭೂಮಿ 189 ಏಕರೆಯಲ್ಲಿ ರೈತರು ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಆರ್ ಯಾಕಾಪೂರರವರು ಸಧ್ಯ 60 ಏಕರೆ ಭೂಮಿ ಅಲ್ಲಿನ ರೈತರಿಗೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿ ರೈತರ ಕುಟುಂಬಗಳಿಗೆ ಆಸರೆಯಾಗಿ ರೈತರಿಂದ ಸೈ ಅನಿಸಿಕೊಂಡರು. ಒಟ್ಟಾರೆ 360 ಏಕರೆಯಲ್ಲಿ 2001ರಲ್ಲಿ ಆಗಿನ ತೆಲಂಗಾಣ ಹಾಗೂ ಕರ್ನಾಟಕದ ಕಲಬುರ್ಗಿ ಜಿಲ್ಲಾಡಳಿತ ಒಗ್ಗೂಡಿ ರೈತರಿಗೆ ಸರ್ಕಾರಿ ಜಮೀನನ್ನು ಒಬ್ಬ ರೈತನಿಗೆ 2-3 ಏಕರೆ ಜಮೀನು ಗ್ರೇಂಟ್ ನೀಡಲಾಯಿತು 63 ರೈತರು ಆ ಭೂಮಿಯನ್ನು ತಮ್ಮ ಹೆಸರಿಗೆ ಪಾಣಿ ಮಾಡಿಕೊಂಡು ಚಿಂಚೋಳಿಯ ಕೆಜಿಬಿ ಬ್ಯಾಂಕ್ ಹಾಗೂ ಕುಂಚಾವರಂನ ಕೆಜಿಬಿ ಬ್ಯಾಂಕ್ ನಲ್ಲಿ ಸಾಲ ಪಡೆಯಲಾಗಿದೆ ಆದರೆ ಭೂಮಿ ಕಳೆದುಕೊಂಡ ರೈತರು ಸಾಲ ಕಟ್ಟುವಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಧ್ಯದಲ್ಲಿ ತೆಲಂಗಾಣದ ಪ್ರಭಾವಿ ನಾಯಕರು ರೈತರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಭೂಮಿ ಕಬಳಿಸುತ್ತಿದ್ದಾರೆ ತಕ್ಷಣ ತಾಲ್ಲೂಕಾಡಳಿತ ಜಿಲ್ಲಾಡಳಿತ ಶಾಸಕರು ಸಂಸದರು ಮಧ್ಯೆಸ್ಥಿಕೆ ವಹಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲಾದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ರೈತರಿಗೆ ಬೇಕಾಗುವ ಸಹಾಯ ಮಾಡಿ ರೈತರಿಗೆ ಭೂಮಿ ದೊರಕಿಸಿಕೊಡುವಂತ ಪ್ರಮಾಣಿಕ ಪ್ರಯತ್ನ ಮಾಡಿ ರೈತರಿಗೆ ಭೂಮಿ ದೂರಕಿಸಿ ಕೊಡುತ್ತೇನೆ ಎಂದು ಜೆಡಿಎಸ್ ಮುಖಂಡ ಸಂಜೀವನ್ ಆರ್.ಯಾಕಾಪೂರ ಹೇಳಿದರು. ತಾಲ್ಲೂಕಾಡಳಿತ ಜಿಲ್ಲಾಡಳಿತ ಶಾಸಕರಿಗೆ ಸಂಸದರಿಗೆ ಎರಡು ವಾರ ಸಮಯವಕಾಶ ನೀಡುತ್ತೇವೆ ರೈತರಿಗೆ ಭೂಮಿ ನೀಡಬೇಕು ಇಲ್ಲಾದಿದ್ದರೆ ಜೆಡಿಎಸ್ ಪಕ್ಷದಿಂದ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಂಜೀವನ್ ಯಾಕಾಪೂರ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಕ್ಕಪ್ರಭುಗೌಡ, ರೈತರುಗಳಾದ ಚಿನ್ನಯ್ಯ ಸಾವಾಲಿ, ಶಂಕ್ರಯ್ಯಸ್ವಾಮಿ, ಶರಣಪ್ಪ, ಶಂಕ್ರಯ್ಯ, ಪ್ರೇಮಸಿಂಗ್, ಕಮಲಿಬಾಯಿ, ಸೋನುಬಾಯಿ, ಗೋಪಿಬಾಯಿ, ಶಾಂತಪ್ಪ, ಮತ್ತು ಅನೇಕ ರೈತರು ಇದ್ದರು.