ರೈತರಿಂದ ಬಿಜೆಪಿ ಮುಖಂಡರಿಗೆ ಮನವಿ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.15: ರೈತರ ಜಮೀನು ಖರೀದಿಸಿ 13 ವರ್ಷಗಳಾದರೂ ಕಾರ್ಖಾನೆ ಸ್ಥಾಪಿಸಿಲ್ಲ, ಉದ್ಯೋಗ ಕೊಟ್ಟಿಲ್ಲ, ನಿರುದ್ಯೋಗ ಭತ್ಯೆ ಇಲ್ಲ, ಭೂಮಿ ಕಳೆದುಕೊಂಡ ರೈತರ ಸ್ಥಿತಿ ಚಿಂತಾಜನಕವಾಗಿದೆ ರೈತರಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಇನ್ನಾದರೂ ಸರ್ಕಾರ ಮುಂದಾಗಬೇಕು ಎಂದು ಕಳೆದ 88 ದಿನಗಳಿಂದ ಕುಡುತಿನಿ ಪಟ್ಟಣದಲ್ಲಿ ಹೋರಾಟ ನಡೆಸುತ್ತಿರುವ ರೈತರು ಮತ್ತು ವಿವಿಧ ಕನ್ನಡಪರ ಸಂಘಟನೆಗಳಿಂದ ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಪಟ್ಟಣಕ್ಕೆ ಆಗಮಿಸಿ ಶ್ರೀ ಅಂಜಿನೇಯ ಸ್ವಾಮಿ ದರ್ಶನ ಪಡೆದು ಹೊರ ನೆಡೆಯುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿ, ಸಚಿವರ ನಿರಾಣಿಯವರ ಜೊತೆ ಮಾತನಾಡಿ, ರೈತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮತ್ತಿತರರು ಉಪಸ್ಥಿತರಿದ್ದರು.

One attachment • Scanned by Gmail