ರೈತರಿಂದ ನೊಟೀಸ್ ಗಳಿಗೆ ಬೆಂಕಿಹಚ್ಚಿ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಜಗಳೂರು.ಡಿ.೯:ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಮೈಕ್ರೋ ಫೈನಾನ್ಸ್ ಗಳು ಸಾಲ ಮರುಪಾವತಿಗೆ ರೈತರಿಗೆ ನೀಡುತ್ತಿರುವ ನೊಟೀಸ್ ತಡೆಹಿಡಿಯುವಂತೆ ನೊಟೀಸ್ ಗಳಿಗೆ ಬೆಂಕಿಹಚ್ಚಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಣದಿಂದ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ ಪ್ರತಿಭಟನಾಕಾರರು ಬ್ಯಾಂಕ್ ಹಾಗೂ ಫೈನಾನ್ಸ್ ಅಧಿ ಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ ನಂತರ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ,ತಾಲೂಕಿನಲ್ಲಿ ಬರ ಆವರಿಸಿ ಬೆಳೆದ ಬೆಳೆಗಳು ಕೈಗೆಟಕುದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲಮರುಪಾವತಿಗೆ ಕಾಲಾವ ಕಾಶ ನೀಡದೆ ಟ್ರ್ಯಾಕ್ಟರ್,ಹಾಗೂ ಜಮೀನು ಗಳಲ್ಲಿ ಬೆಳೆ ಬೆಳೆಯಲು ಸಾಲಮಾಡಿರುವುದು ಸರಿಯಷ್ಟೆ ಆದರೆ ಸಾಲ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಫೈನಾ ನ್ಸ್ ಕಂಪನಿಗಳು ನೋಟಿಸ್ ಜಾರಿಗೊಳಿಸಿ ಸಾಲಮರು ಪಾವತಿಗೆ ಬಲವಂತದಿಂದ ವಸೂಲಾತಿ ಕಿರುಕುಳ ನೀಡು ತ್ತಿದ್ದಾರೆ .ರೈತರು ಎದೆಗುಂದದೆ ಸಾಲವನ್ನು ಸವಾಲಾಗಿ ಸ್ವೀಕರಿಸಬೇಕು ರೈತ ಸಂಘಟನೆ ಮೊರೆ ಆಗಮಿಸಬೇಕು ಎಂದು ಕರೆ ನೀಡಿದರು.ರೈತಕಾರ್ಮಿಕರ ಖಾತೆಗೆ ವೃದ್ದಾಪವೇತನ,ಗೃಹಲಕ್ಷ್ಮಿ ಯೋಜನೆ,ಬೆಳೆ‌ಪರಿಹಾರ ಸೇರಿದಂತೆ ವಿವಿಧ ಸಾಮಾಜಿಕ ಭದ್ರತೆಯಡಿ ಸರಕಾರ ಜಮಾಮಾಡುವ ಹಣವನ್ನು ಕೂಡಲೇ ಸಾಲಮರುಪಾವತಿಗೆ ಜಮಾಮಾಡಬಾರದು ಎಂದು ಆಗ್ರಹಿಸಿದರು.ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮನವಿ ಸ್ವೀಕರಿಸಿ ಮಾತನಾಡಿ,ಮುಂದಿನ ಸೋಮವಾರದಂದು ತಾಲೂಕಿನ ಎಲ್ಲಾ ಮೈಕ್ರೋ ಫೈನಾನ್ಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ವ್ಯವಸ್ಥಾಪಕರನ್ನು ರೈತ ಸಂಘಟನೆ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ನಡೆಸಿ ರೈತರ ಸಾಲ ಮರುಪಾವತಿಗೆ ಕಾಲಾ ವಕಾಶ ನೀಡಲು ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ ನಂತರ ತಾತ್ಕಾಲಿಕವಾಗಿ ಪ್ರತಿ ಭಟನೆ ಹಿಂಪಡೆದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಪ್ರಧಾನಕಾರ್ಯ ದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ,ಪದಾಧಿಕಾರಿಗಳಾ ದ ಸತೀಶ್ ಗೌಡಗೊಂಡನಹಳ್ಳಿ,ಕಾನನಕಟ್ಟೆ ತಿಪ್ಪೇಸ್ವಾಮಿ, ರಾಜನಹಟ್ಟಿರಾಜು,ಸಹದೇವರೆಡ್ಡಿ,ಅಂಜಿನಪ್ಪ,ತಿಪ್ಪಣ್ಣ,ಸಣ್ಣಪಾಲಯ್ಯ,ತಿಪ್ಪೇಶ್,ಲೋಕಣ್ಣ,ಮಂಜುನಾಥ್ ರೆಡ್ಡಿ,ಅಶೋಕ,ಚಿದಾನಂದ ಸೇರಿದಂತೆ ಭಾಗವಹಿಸಿದ್ದರು.