ರೈತರಿಂದ ತರಕಾರಿ ಖರೀದಿಸಿ ಕೂಲಿಕಾರರಿಗೆ ವಿತರಿಸಿದ ಸಂಜೀವನ ಯಾಕಪೂರ

ಚಿಂಚೋಳಿ,ಜೂ.7- ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ತರಕಾರಿ ಮತ್ತು ಮಾಸ್ಕ್ ಗಳನ್ನು ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ ಯಾಕಪೂರ ಅವರು ವಿತರಣೆ ಮಾಡಿದರು.
ಸ್ಥಳೀಯ ರೈತರಿಂದ ತರಕಾರಿಗಳನ್ನು ಖರೀದಿಸಿದ ಯಾಕಾಪೂರ ಅವರು, ಇತ್ತ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ನೆರವಾಗಿರುವುದು ವಿಶೇಷ.
ರಾಜ್ಯ ಸರ್ಕಾರವು ಕೊರೊನಾ ಸೋಂಕು ತಡೆಯಬೇಕೆಂದು ಲಾಕ್ಡೌನ್ ಮಾಡಿದ್ದು, ಇದರಿಂದ ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ತರಕಾರಿಗಳನ್ನು ಬೇರೆ ಕಡೆ ಕಳಿಸಲು ಸಾದ್ಯವಾಗುತ್ತಿಲ್ಲ ಇದರಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಮುಂದಾಗದಿರುವುದು ಖಂಡನೀಯ ಎಂದ ಅವರು, ಇಲ್ಲಿನ ಕೆಲ ರೈತರ ತರಕಾರಿಗಳನ್ನು ಖರೀದಿಸಿ ಅವುಗಳನ್ನು ಕೂಲಿಕಾರರಿಗೆ ಹಂಚಿಕೆ ಮಾಡುವ ಕೆಲಸವನ್ನು ತಮಗೆ ಸಾಧ್ಯವಾದಷ್ಟು ಮಾಡುವುದಾಗಿ ಹೇಳಿದರು.
ತಾಲೂಕಿನ ರೈತರಿಗೆ ಬೆಳೆ ಹಾಳಾಗದಂತೆ ಅವರ ಹೊಲಕ್ಕೆ ಹೋಗಿ ತರಕಾರಿಯನ್ನು ಖರೀದಿಸಲು ಸರ್ಕಾರ ಮತ್ತು ತಾಲೂಕ ಆಡಳಿತ ಮುಂದಾಗಬೇಕು.
ಚಿಂಚೋಳಿ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗಳು ಲಾಕ್ಡೌನ್ ನಿಂದ ರೈತರ ಬೆಳೆದ ಹಣ್ಣು ಮತ್ತು ತರಕಾರಿಗಳು ಹಾಳಾಗುತ್ತಿದ್ದು ಸರ್ಕಾರ ವತಿಯಿಂದ ಎಕರೆಗೆ 20,000 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ. ಕಲ್ಲೂರ್ ಗ್ರಾಮದ ಜೆಡಿಎಸ್ ಪಕ್ಷದ ಮುಖಂಡರಾದ ಯಶವಂತ. ಸದ್ದಾಂ.ಅಂಜಪ್ಪ ಝುಬೈರ್. ಬಕ್ಕಪ ಪಾಟೀಲ್. ಹುಲಗಪ್ಪ ಭೋವಿ. ರವಿಕುಮಾರ್ ಮರಾಠ. ಜಗನಾಥ್ ಮ್ಯಾಕಲ್. ಸದ್ದಾಮ್. ಪ್ರಶಾಂತ ಕಂಟ್ಲಿ. ಶಾಂತುಗುರು ಬೇಂಡಂಪಾಲಿ. ಜಾಹೀರ್. ರವಿಕುಮಾರ್ ಪೂಜಾರಿ. ಸಚಿನ ಕೊಂಡಮ್. ಅಲ್ಲಾಬಕ್ಷ. ಉಮರ್ ಪಷಾ. ಮಹೇಶ್ ಗುಮ್ಮಿ. ನಾಗೇಶ್ ಭೋವಿ. ಚನ್ನು ಧಬಾ. ಸಿದ್ದು ಕೊರ್ವಿ. ಚಂದ್ರು ಗೌಡ್. ಗೌತಮ್ ಬುದ್ಧ. ಬಾಬು ಭೋವಿ. ರಮೇಶ್ ಗುಮಿ. ರಾಮುಲು ಜಗ್ಗಲ್. ಮತ್ತು ಅನೇಕ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.