ರೈತರಿಂದ ತರಕಾರಿ ಖರೀದಿಗೆ ಮುಂದಾದ ಬಸವರಾಜು ಶಿವಗಂಗಾ

ಚನ್ನಗಿರಿ.ಜೂ.೩ : ಕೋವಿಡ್ 2  ನೇ ಅಲೆಯಿಂದ ಲಾಕ್ ಡೌನ್ ಮಾಡಲಾಗಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ಈ ಕಾರಣ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರು ಬೆಳೆದ ತರಕಾರಿಗಳನ್ನ ನೇರವಾಗಿ ಖರೀದಿಸಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೀಡಲಾಗುವುದು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದ್ದಾರೆ. ರೈತರು ಕಷ್ಟಪಟ್ಟು ತರಕಾರಿ ಬೆಳೆದರೂ ಮಾರಾಟ ಮಾಡುವುದು ಕಷ್ಟವಾಗಿದೆ. ಲಾಕ್ ಡೌನ್ ಹಿನ್ನೆಲೆ ಮಾರುಕಟ್ಟೆ ಹಾಗೂ ವಾಹನ ವ್ಯವಸ್ಥೆ ಇಲ್ಲದೇ ತರಕಾರಿ ಮಾರಾಟ ಮಾಡುವುದು ಕಷ್ಟವಾಗಿದೆ. ಹೀಗಾಗಿ ನಾವೇ ರೈತರಿಂದ ತರಕಾರಿ ಖರೀದಿಸಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ವಿತರಣೆ ಮಾಡಲು ನಿರ್ಧರಿಸಿದ್ದೇವೆ ಎಂದರು. ಇದರಿಂದ ರೈತರಿಗೆ ಸಹಕಾರಿಯಾಗಲಿದ್ದು ಬಡ ಕುಟುಂಬಗಳಿಗೂ ಅನುಕೂಲವಾಗಲಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ರೈತರು ತಮ್ಮ ಜಮೀನುಗಳಲ್ಲಿ ತರಕಾರಿ ಬೆಳೆದು ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ ನಮ್ಮನ್ನ ಸಂಪರ್ಕ ಮಾಡಬಹುದು 9141100999 . ನೇರವಾಗಿ ನಾವೇ ರೈತರ ಜಮೀನುಗಳಿಗೆ ಭೇಟಿಕೊಟ್ಟು ತರಕಾರಿ ಖರೀದಿಸುತ್ತೇವೆ. ಬಳಿಕ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಕಷ್ಟ ಕುಟುಂಬಗಳಿಗೆ ತರಕಾರಿ ವಿತರಣೆ ಮಾಡಲಾಗುವುದೆಂದು ಬಸವರಾಜು ವಿ ಶಿವಗಂಗಾ ತಿಳಿಸಿದ್ದಾರೆ. ಬೇಸಿಗೆ ಹಿನ್ನೆಲೆ ಕೆಲ  ರೈತರು ಸಾಲ ಮಾಡಿ ತರಕಾರಿ ಬೆಳೆದಿರುತ್ತಾರೆ ಇದೀಗ ಲಾಕ್ ಡೌನ್ ಹಿನ್ನೆಲೆ ಹಳ್ಳಿ ರೈತರು ಮಾರುಕಟ್ಟೆಗೆ ಬಂದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ವಾಹನ ವ್ಯವಸ್ಥೆ ಕೂಲ್ಲ ಇಲ್ಲದಿರುವುದರಿಂದ ತರಕಾರಿ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನೆಲ್ಲಾ ಮನಗೊಂಡು  ರೈತರಿಂದಲೇ ನೇರವಾಗಿ ತರಕಾರಿ ಖರೀದಿ ಮಾಡಲು ಮುಂದಾಗಿದ್ದೇವೆ ಈ ಮೂಲಕ ರೈತರಿಗೆ ನೆರವಾಗಲು ಬಯಸಿದ್ದೇವೆ ಎಂದರು. ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತರಕಾರಿ ಬೆಳೆದ ರೈತರು ಆತಂಕ ಪಡುವ ಅಗತ್ಯವಿಲ್ಲ ನಿಮ್ಮ ಜೊತೆ ನಾವಿದ್ದೇವೆ ಅಂದು ಅಭಯ ನೀಡಿದರು. ರೈತರ ಜಮೀನುಗಳಿಗೆ ನಾವೇ ಖುದ್ಧ ಬೇಟಿ ನೀಡಿ ತರಕಾರಿ ಖರೀದಿಸಿ ನಂತರ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಸಹಯೋಗದೊಂದಿಗೆ ಮನೆ ಮನೆಗೆ ತರಕಾರಿ ನೀಡುತ್ತೇವೆ ಎಂದು ತಿಳಿಸಿದರು..