ರೈತರಾಗಿರುವ ಕುರಿತು ಹೆಮ್ಮೆಯಿರಲಿ

ವಿಜಯಪುರ.ಮೇ೧೪:ಪ್ರತಿಯೊಬ್ಬ ರೈತರು ರೈತರಾಗಿರುವ ಬಗ್ಗೆ ಹೆಮ್ಮೆ ಪಡಬೇಕೆಂದು ಅನಾವಶ್ಯಕವಾಗಿ ರೈತಪಿತನವನ್ನು ಬಿಡಬಾರದೆಂದು ಸಾಧ್ಯವಾದಷ್ಟು ನಮ್ಮ ಹಳೆಯ ತಳಿಗಳಾದ ಹಳ್ಳಿಕಾರ್, ಹಸುಗಳನ್ನು ಸಾಕುವ ಮೂಲಕ ಅದನ್ನು ಉಳಿಸಿ ಬೆಳೆಸುವಂತಾಗಬೇಕೆಂದು ಬಿಗ್ ಬಾಸ್ ಖ್ಯಾತಿಯ ವರ್ತೂರ್ ಸಂತೋಷ್ ತಿಳಿಸಿದರು.
ಅವರು ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯ ಬಿಮಲ್ ಮಾರುತಿ ಕಾರ್ ಷೋರೂಮ್ನಲ್ಲಿ ನೂತನವಾಗಿ ಬಂದ ಫೋರ್ತ್ ಜನರೇಶನ್ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬಹಳಷ್ಟು ಕಡೆ, ಸಾಕಷ್ಟು ಹೆಸರು ಮಾಡಿದ ಸೆಲೆಬ್ರೇಟಿಗಳನ್ನು ಇಂತಹ ಕಾರ್ಯಕ್ರಮಕ್ಕೆ ಕರೆಸುವುದು ವಾಡಿಕೆ, ಆದರೆ ನನ್ನಂತಹ ಒಬ್ಬ ರೈತನನ್ನು ಕರೆಸಿ ನೂತನ ಅವತರಣೆಯ ಕಾರನ್ನು ಬಿಡುಗಡೆಗೊಳಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ್, ಮಾರುತಿ ಶೋರೂಮ್ ನ ಜನರಲ್ ಮ್ಯಾನೇಜರ್ ಅಜಯ್ ಗೌಡ, ಸೇಲ್ಸ್ ಮ್ಯಾನೇಜರ್ ಶ್ರೀಕಾಂತ್, ಸಿಬ್ಬಂದಿ ವರ್ಗದವರಾದ ಎಂ.ರಕ್ಷಿತ್, ಮೋಹನ್ ಶ್ರೀವತ್ಸ, ಚಂದ್ರು,ಸಿಂಧು,ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.