ರೈತರಲ್ಲಿ ಇಳುವರಿ ಆಸೆ ಚಿಗುರಿಸಿದ ಚಳಿ; ಕಡಲೆ ಬೆಳೆಗೆ ಪೂರಕವಾದ ವಾತವಾರಣ 

ಜಗಳೂರು.ಜ.೨೪;- ತಾಲೂಕಿನಲ್ಲಿ ಈ ಬಾರಿ ಮುಂಗಾರು ಬೆಳೆ ಮಳೆ ಕೊರತೆಯಿಂದ 80% ಬೆಳೆ ಹಾನಿಯಾಗಿದೆ ಅಲ್ಲದೆ ತಾಲೂಕು ಬರ ಪಟ್ಟಿಗೆ ಸೇರಿಸಲಾಗಿದ್ದು, ಈ ಬಾರಿ ರೈತರು ಕೈ ಇಟ್ಟ ಕಡೆಯಲ್ಲಿ ನಷ್ಟ ಆವರಿಸಿದೆ. ಆದರೆ ಹಿಂಗಾರು  ಕಡಲೆ ಬೆಳೆಗಳ ಇಳುವರಿ ಆಸೆಯನ್ನು ರೈತರಲ್ಲಿ ಚಿಗುರಿಸಿದೆ.ಹೌದು ತಾಲೂಕಿನಲ್ಲಿ ಮುಂಗಾರಿನಲ್ಲಿ ಬೆಳೆ ನಷ್ಟವಾಗಿದ್ದು, ಇದರ ಹಿನ್ನಲೆ ತಾಲೂಕಿನ ರೈತರು ಹಿಂಗಾರು ಮಳೆಯು ಕೊನೆ ಹಂತದಲ್ಲಿ ಕೈ ಹಿಡಿದ ಹಿನ್ನಲೆ  ಕಡಲೆ, ಬೀಳಿಜೋಳ ಹೆಚ್ಚೆತವಾಗಿ ಬಿತ್ತನೆ ಮಾಡಿದ್ದಾರೆ, ಮಳೆ ಕೈ ಕೊಟ್ಟು ರೈತರು ಸಂಪೂರ್ಣ ನಷ್ಟವಾಗಿದ್ದರು  ಡಿಸೆಂಬರ್ ನಿಂದ ಉತ್ತಮ ವಾತವಾರಣವಲ್ಲ ದೆ ಚಳಿ ಹೆಚ್ಚಾಗಿದ್ದು  ಮುಂಜಾನೆ ಬಿಳುವ ಇಬ್ಬನಿ ಹಾಗೂ ತಂಪು ಗಾಳಿಯಲ್ಲದೆ ಉಷ್ಣಾಂಶ ಕನಿಷ್ಠ ಮಟ್ಟಿಗೆ ತಲುಪಿದ್ದು  ಹಿಂಗಾರಿನಲ್ಲಿ ಬಿತ್ತಿದ ಬೆಳೆಗಳಾದ ಕಡಲೆ ಹಾಗೂ ಬಿಳಿಜೋಳ ಇಳುವರಿ ಆಸೆ ಹೆಚ್ಚಿಸುವೆ.ತಾಲೂಕಿನಲ್ಲಿ ಹಿಂಗಾರು ಮುಖ್ಯ ಬೆಳೆಯಾಗಿ ಕಡಲೆ ಬೆಳೆ ಯಾಗಿದ್ದು, ಚಳಿಯಿಂದ ಕೂಡಿದ ವಾತವರಣವು ಕಡಲೆ ಹಾಗೂ ಬಿಳಿಜೋಳ ಬೆಳೆಗೆ ವರವಾಗಿ ಪರಿಣಮಿಸಿದೆ.ಇದೆ ರೀತಿ ಚಳಿ ಮುಂದುವರೆದರೆ ಕಡಲೆ ಬೆಳೆಯಲ್ಲಿ ಹುಳಿ ಹೆಚ್ಚಾಗಿ ಕಾಳು ಪೂರ್ಣ ಪ್ರಮಾಣದಲ್ಲಿ ಕಟ್ಟುತ್ತದೆ ಅಲ್ಲದೆ ಇಳುವರಿ ಪ್ರಮಾಣ ಹೆಚ್ಚು ಕಾಣಬಹುದಾಗಿದೆ. ಚಳಿ ಹೆಚ್ಚರಿವುದ್ದರಿಂದ ಬಿಳಿಜೋಳ ಕುಸುಬೆ ಸಹ ಕಣ್ಮನ ಸೆಳೆಯುವಂತೆ ಬೆಳೆದಿದ್ದು ಎಲ್ಲೆಲ್ಲೂ ಬೆಳೆ ಹುಲುಸಾಗಿ ಕಾಣುತಿದ್ದು, ಹೆಚ್ಚು ಇಳುವರಿಯು ಬರುವ ಸಾಧ್ಯತೆ ಇದೆ.