ರೈತಬಾಂಧವರು ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಕೈಗೊಳ್ಳುವಂತೆ ಸಲಹೆ

ರಾಯಚೂರು,ಜೂ.೦೮-
ರೈತ ಭಾಂಧವರು ಮುಂಗಾರಿನ ಸಿದ್ಧತೆಯನ್ನು ಪ್ರಾರಂಬಿಸಿದ್ದು, ಈಗಾಗಲೇ ಬೀಜಗಳನ್ನು ಕೋಳ್ಳಲಾರಂಭಿಸಿದ್ದಾರೆ ಈ ಸಂದರ್ಭದಲ್ಲಿ ಉತ್ತಮ ಬೀಜದ ಆಯ್ಕೆಯ ಜೊತೆಗೆ ಬಿತ್ತನೆ ಪೂರ್ವದಲ್ಲಿ ಬೀಜೋಪಚಾರವೂ ಕೂಡ ಅತಿ ಪ್ರಮುಖವಾದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂzದ ರಾಯಚೂರಿನ ಕೀಟಶಾಸ್ತ್ರ ವಿಜ್ಞಾನಿಯಾದ ಡಾ. ಶ್ರೀವಾಣಿ ಜಿ.ಎನ್.ರವರು ರೈತರಿಗೆ ಬೀಜೋಪಚಾರ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಕೃಷಿ ವಿಜ್ಞಾನ ಕೇಂzದ ಮಣ್ಣು ವಿಜ್ಞಾನಿಗಳಾದ ಡಾ.ಎಸ್.ಎನ್.ಭಟ್ ಹಾಗೂ ಡಾ.ಹೇಮಲತಾ.ಕೆ.ಜೆ, ವಿಜ್ಞಾನಿ (ತೋಟಗಾರಿಕೆ) ಸಹ ಉಪಸ್ಥಿತರಿದ್ದರು.
ಬೀಜೋಪಚಾರವೆಂದರೆ ಬೀಜಗಳನ್ನು ರೋಗಾಣು ಹಾಗೂ ಕೀಟಗಳಿಂದ ರಕ್ಷಿಸಲು ಶೀಲಿಂಧ್ರನಾಶಕ ಮತ್ತು
ಕೀಟನಾಶಕಗಳಿಂದ ಉಪಚಾರ ಮಾಡುವುದು.
ಬೀಜೋಪಚಾರದ ಲಾಭಗಳು:
ಬೆಳೆಯಿಂದ ಬೆಳೆಗೆ ಬೀಜಗಳ ಮುಖಾಂತರ ಹರಡುವ ರೋಗಗಳನ್ನು ನಿಯಂತ್ರಿಸುವುದು. ಉದಾ: ಭತ್ತದಲ್ಲಿ ಕಾಣುವ ಕಾಡಿಗೆ ರೋಗ ಬೀಜ ಕೊಳೆಯುವಿಕೆ ಮತ್ತು ಸಸಿ ಒಣಗುವಿಕೆಯನ್ನು ತಡೆಯುತ್ತದೆ. ಉದಾ: ಮೆಣಸಿನಕಾಯಿಯಲ್ಲಿ ಕಾಡುವ ಸಸಿ ಕೊಳೆ ರೋಗ, ಬೀಜದ ಮೊಳಕೆ ಪ್ರಮಾಣ ಹಾಗೂ ಸಂUಹಣಾ ಶಕ್ತಿಯನ್ನು ಅಧಿಕಗೊಳಿಸಬಹುದು
ಬೀಜೋಪಚಾರ:
ಭತ್ತದಲ್ಲಿ: ಶಿಲಿಂಧ್ರ ನಾಶಕಗಳಾದ ಕಾರ್ಬನ್‌ಡೈಜಿಮ್ ೫೦ ಡಬ್ಲೂ. ಪಿ. ಪ್ರತಿ ಕೆ.ಜಿ. ಬೀಜಕ್ಕೆ ೨ ಗ್ರಾಂ ನಂತೆ ಉಪಚಾರ ಮಾಡಿ ಬಿತ್ತಬೇಕು.
ತೊಗರಿಯಲ್ಲಿ ಬರುವ ನೆಟೆರೋಗ, ಸೊರಗುರೋಗ ಮುಂತಾದವುಗಳಿಗೆ ಪ್ರತಿ ಕೆ.ಜಿ. ಬೀಜಕ್ಕೆ ೨ ಗ್ರಾಂ ಕ್ಯಾಪ್ಟನ್ ೮೦ ಡಬ್ಲೂ. ಪಿ. ಅಥವಾ ಥೈರಾನ್ ೭೫ ಡಬ್ಲೂ. ಪಿ. ಹತ್ತಿಯಲ್ಲಿ ರಸಹೀರುವ ಕೀಟಗಳ ನಿಯತ್ರಣಕ್ಕಾಗಿ ಪ್ರತಿ ಕೆ.ಜಿ. ಬೀಜವನ್ನು ೧೦ ಗ್ರಾಂ. ಇಮಿಡಾಕ್ಲೋಪ್ರಿಡ್ ೭೫ ಡಬ್ಲೂ.ಎಸ್. ಅಥವಾ ೫ ಗ್ರಾಂ. ಥಯಾಮಿಥಾಕ್ಸಾಮ್ ೭೦ ಡಬ್ಲೂ.ಎಸ್‌ದಿಂದ ಬೀಜೋಪಚಾರ ಮಾಡುವುದರಿಂದ ಮೊದಲನೆಯ ಹಂತದಲ್ಲಿ ಬರುವ ರಸ ಹೀರುವ ಕೀಟಗಳನ್ನು ೩೫-೪೦ ದಿನಗಳ ವರೆಗೆ ನಿಯಂತ್ರಿಸಬಹುದು.
ರಾಸಾಯನಿಕ ಪೀಡೆನಾಶಕಗಳಲ್ಲದೆ ವೈವಿಕ ಪೀಡೆನಾಶಕಳಾದ ಟ್ರೈಕೋಡರ್ಮ್ ೪ ಗ್ರಾಂ. ಪ್ರತಿ ಬೀಜಕ್ಕೆ (ತೊಗರಿ),ಸೂಡೋಮೋನಾಸ್ ೧೦ ಗ್ರಾಂ ತಿ ಕೆ.ಜಿ. ಬೀಜP (ಭತ್ತ) ಮತ್ತು ಮೆಟಾರೈಜಿಯಂ ೪ ಗ್ರಾಂ. ತಿ ಕೆ.ಜಿ. ಬೀಜಕ್ಕೆ ಮುಂತಾದ ಪೀಡೆನಾಶಕಗಳನ್ನು ಬಿತ್ತನೆಗೆ ಮುಂಚೆ ಉಪಚರಿಸಬೇಕು. ಇವಲ್ಲದೆ. ಜೈವಿಕ ಗೊಬ್ಬರಗಳಾದ ಪಿ.ಎಸ್.ಬಿ. ೭.೫ ಗ್ರಾಂ ತಿ ಕೆ.ಜಿ. ಬೀಜಕ್ಕೆ ಅಜೋರಲಮ್ ೧೦ ಗ್ರಾಂ. ತಿ ಕೆ.ಜಿ. ಬೀಜಕ್ಕೆ ಮತ್ತು ರೈಜೋಬಿಯಂ ೧೦ ಗ್ರಾಂ. ತಿ ಕೆ.ಜಿ. ಬೀಜಕ್ಕೆ (ತೊಗರಿ) ಉಪಚರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಪ್ರಹ್ಲಾದ, ಡಾ. ಶ್ರೀವಾಣಿ ಜಿ.ಎನ್. (ಕೀಟ ಶಾಸ್ತ್ರ) ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ವಿಜ್ಞಾನಿ (ಕೀಟಶಾಸ್ತ್ರ), ಕೆ.ವಿ.ಕೇಂ., ರಾಯಚೂರು ದೂರವಾಣಿ ಸಂಖ್ಯೆ: ೦೮೫೩೨-೨೨೦೧೯೬ ಉಚಿತ ಸಹಾಯವಾಣಿ ಸಂಖ್ಯೆ:೧೮೦೦ ೪೨೫ ೦೪೭೦ ಮೊಬೈಲ್ ಸಂ: ೯೪೮೦೬೯೬೩೧೪