
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ5: ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೀತಿಯಲ್ಲಿಯೇ ನಾಲ್ಕು ಸಾವಿರಗಳನ್ನು ನೀಡುತ್ತಿದ್ದರು.
ಇದು ರೈತರಿಗೆ ಅನುಕೂಲವಾಗಿತ್ತು ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಬಿಜೆಪಿ ಸರ್ಕಾರದ ಕೆಲವು ಯೋಜನೆಗಳನ್ನು ಅದರಲ್ಲೂ ವಿಶೇಷವಾಗಿ ರೈತ ಪರ ಯೋಜನೆಗಳನ್ನು ಸ್ಥಗಿತಗೊಳಿಸಿರುವುದು ಖಂಡನಿಯ ಎಂದು ಗದಗ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂಬಣ್ಣಾ ಬಾಳಿಕಾಯಿಯವರು ಹೇಳಿದ್ದಾರೆ.
ಅವರು ಹೇಳಿಕೆಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರ ಸುಮಾರು 60,000 ಕೋಟಿ ಯೋಜನೆಗಳ 5 ಗ್ಯಾರಂಟಿಗಳನ್ನು ನೀಡಿದ್ದು ಆದರೆ ರೈತರಿಗೆ ಅನುಕೂಲವಾದ ಮತ್ತು ಸಹಾಯಧನದ ರೂಪದಲ್ಲಿದ್ದ ಈ ಅನುದಾನವನ್ನು ಕಡಿತಗೊಳಿಸಿರುವುದು ನ್ಯಾಯ ಸಮ್ಮತವಲ್ಲ. ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಂದು ಬಸವಳಿದ ಅನ್ನದಾತನ ನೆರವಿಗೆ ಒಣ ರಾಜಕೀಯ ಬೆರಸದೆ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರದ ರೈತ ಪರ ಯೋಜನೆಯನ್ನು ಈ ಕೂಡಲೇ ಜಾರಿಗೊಳಿಸಬೇಕು ಇಲ್ಲದಿದ್ದರೆ ರೈತರ ಸಂಘಟಿಸಿ ಹೋರಾಟಕ್ಕಿಳಿಯುವದಾಗಿ ಲಕ್ಷ್ಮೇಶ್ವರ ತಾಲೂಕ ಸಮಗ್ರ ರೈತರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಆಗಿರುವ ಚಂಬಣ್ಣ ಬಾಳಿಕಾಯಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಬೇರಪ್ಪ ಮಹಾಂತ ಶೆಟ್ಟರ್ ಶೇಖಣ್ಣ ಗಡಿಗಿ ಸೇರಿದಂತೆ ಅನೇಕರಿದ್ದರು.