ರೈತನ ಮೇಲೆ ತೊಳ ದಾಳಿ

ಔರಾದ : ಆ.4:ಮಂಗಳವಾರ ತಾಲೂಕಿನ ನಾಗನಪಲ್ಲಿ ಗ್ರಾಮದ ಶಿವಾರದಲ್ಲಿ ಮೇಕೆಗಳನ್ನು ಮೇಯಿಸಲು ಹೋದ ವ್ಯಕ್ತಿಯೊರ್ವನ ಮೇಲೆ ತೋಳ ವೊಂದು ಮಾರಣಾಂತಿಕ ದಾಳಿ ಮಾಡಿರುವ ಘಟನೆಯೊಂದು ಜರುಗಿದೆ.

ಶಂಕರ್ ವಡೆಯರ್(60) ಗಾಯಗೊಳಗಾದ ದುರ್ದೈವಿಯಾಗಿದ್ದು, ತೋಳ ಮೇಕೆಯ ಮೇಲೆ ದಾಳಿ ಮಾಡುತ್ತಿರುವಾಗ , ಶಂಕರ್ ತೋಳದ ಕಪಿಮುಷ್ಟಿಯಿಂದ ಮೇಕೆಯನ್ನು ಬಿಡಿಸಲು ಹೋಗಿರುವಾಗ , ತೋಳ ಈತನ ಮೇಲೆ ದಾಳಿ ಮಾಡಿದೆ. ಇತನ್ನು ಚಿಂತಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.