ರೈತನ ಮಗಳಿಗೆ ಕನ್ನಡದಲ್ಲಿ ಮೂರು ಚಿನ್ನದ ಪದಕ

ದಾವಣಗೆರೆ.ಏ.೮: ದಾವಣಗೆರೆ ವಿಶ್ವವಿದ್ಯಾಲಯದಲ್ಲಿಂದು ನಡೆದ ಘಟಿಕೋತ್ಸವದಲ್ಲಿ ೪೪ ವಿದ್ಯಾರ್ಥಿಗಳು ೭೪ ಚಿನ್ನದ ಪದಕಗಳನ್ನು ಪಡೆದು ಸಂಭ್ರಮಿಸಿದ್ದಾರೆ.
ಕನ್ನಡ ವಿಷಯದಲ್ಲಿ ವಿಜಯಲಕ್ಷ್ಮಿ ಬಾರ್ಕಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಿರೇ ಬಿದರಿ ಗ್ರಾಮದವರಾದ ರೈತರಾದ ದ್ಯಾಮಪ್ಪ ಹಾಗೂ ಕೂಲಿ ಕೆಲಸ ಮಾಡುವ ಮಹಾಂತಮ್ಮ ಅವರ ಪುತ್ರಿ ವಿಜಯಲಕ್ಷ್ಮಿ ಕಡುಬಡತನದಲ್ಲಿ ಅರಳಿದ ಪ್ರತಿಭೆ.ಕನ್ನಡ ಉಳಿಸಿ ಬೆಳೆಸುವ ಹಂಬಲ ಹೊಂದಿರುವ ಅವರು ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ್ದಾರೆ.ಕನ್ನಡ ಶಿಕ್ಷಕಿ ಹಾಗೂ ಪ್ರಾಧ್ಯಾಪಕಿಯಾಗಿ ಕನ್ನಡ ಸೇವೆ ಸಲ್ಲಿಸುವ ಹಂಬಲ ನನ್ನದು ಎನ್ನುತ್ತಾರೆ ವಿಜಯಲಕ್ಷ್ಮಿ.ಕೆಲವರಿಗೆ ಇಂಗ್ಲೀಷ್ ಭಾಷೆಯೆಂದರೆ ಕಬ್ಬಿಣದ ಕಡಲೆಇದ್ದಂತೆ ಆದರೆ ದಾವಣಗೆರೆಯ ನಿಸರ್ಗಳಿಗೆ ಇಂಗ್ಲೀಷ್ ಸುಲಲಿತ ಇಂಗ್ಲೀಷ್ ಎಂ.ಎಯಲ್ಲಿ ಮೂರು ಚಿನ್ನದ ಪದಕ ಲಭಿಸಿದೆ.ಹೆಚ್ಚು ಓದಿದ ಪರಿಣಾಮ ಬ್ರೇನ್ ಸ್ಟ್ರೋಕ್ ಗೆ ಒಳಗಾದ ನಿಸರ್ಗ ಅನಾರೋಗ್ಯದ ನಡುವೆಯೂ ಮೂರು ಚಿನ್ನದ ಪದಕ ಪಡೆದ ಸಾಧಕಿ.ಗ್ರಾಮೀಣಭಾಗದಲ್ಲಿ ಇಂಗ್ಲೀಷ್ ಶಾಲೆ ತೆರೆದು ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಬೋಧಿಸುವ ಹಂಬಲ ನನ್ನದು ಎನ್ನುತ್ತಾರೆ ನಿಸರ್ಗ.ಪತ್ರಿಕೋದ್ಯಮದಲ್ಲಿ ಎರಡು ಚಿನ್ನದ ಪದಕ ಪಡೆದ ಟಿ.ಎಸ್ ಪ್ರೀತಿಗೆ ಕೆಎಎಸ್ ಮಾಡುವ ಗುರಿ.ಮೊದಲಿನಿಂದಲೂ ಪತ್ರಿಕೋದ್ಯಮದಲ್ಲಿ ಸಾಧಿಸುವ ಅಭಿಲಾಷೆ ಹೊಂದಿರುವ ಪ್ರೀತಿಗೆ ಪತ್ರಿಕೊದ್ಯಮದಲ್ಲಿ ಪಿಹೆಚ್ ಡಿ ಮಾಡುವ ಆಸೆ ಇದರೊಂದಿಗೆ ಪತ್ರಿಕೋದ್ಯಮದಲ್ಲಿ ಮುಂದುವರೆಯುವುದಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಪದಕ ಪಡೆದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.