ರೈತನ ಕೊಲೆ: ಅರಣ್ಯ ಇಲಾಖೆ ಗಾರ್ಡ್ ವಿರುದ್ಧ ದೂರು

ಚಿಂಚೋಳಿ,ಮಾ.30- ತಾಲೂಕಿನ ಗಡಿಭಾಗದ ಗೌಸಾಬಾದ ತಾಂಡದ ರೈತ ಮಾಣಿಕ ಹೀರು ಚವ್ಹಾಣ 65 ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಅರಣ್ಯ ಇಲಾಖೆ ಗಾರ್ಡ್ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಲಾಗಿದೆ.
ಕೊಲೆಯಾದ ರೈತನ ಮಗ ಠಾಕೂರ್ ಮಾಣಿಕ ಚವ್ಹಾಣ ಅವರು, ಚಿಂಚೋಳಿ ಠಾಣೆಯಲ್ಲಿ ದೂರು ದಾಖಲಾಗಿಸಿದ್ದಾರೆ.
ಮಾಣಿಕ ಹೀರು ಚವ್ಹಾಣ ಚಿಂಚೋಳಿ ತಾಲೂಕಿನ ಕುಸ್ರಂಪಳ್ಳಿ ಗ್ರಾಮದ ಸೀಮೆಯಲ್ಲಿ ಜಮೀನು ಹೊಂದಿದ್ದಾರೆ ಸರ್ವೇ ನಂ.19 ಇದ್ದು, ಇದರಲ್ಲಿ 4 ಎಕರೆ 20 ಗುಂಟೆ ಜಮೀನು ಇರುತ್ತದೆ.
ಜಮೀನು ಪಕ್ಕದಲ್ಲಿ ಅರಣ್ಯ ಇಲಾಖೆಯ ಸಂಬಂದಪಟ್ಟ ವನ್ಯಜೀವಿ ಪ್ರದೇಶವಿದ್ದು ವನ್ಯಜೀವಿಯ ಗಾರ್ಡ್‍ಗಳಾದ ಹಣಮಂತ, ದೇವಪ್ಪಾ ನರಸಪ್ಪ, ಸಂಬಣ್ಣ ನರಸಪ್ಪಾ, ರಾಜು ಬಕ್ಕಪ್ಪಾ, ಪಂಡರಿ ರಾಮಣ್ಣಾ, ಇವರುಗಳ ಮಧ್ಯೆ ಕೊಲೆಯಾಗಿದ್ದಾರೆ ಎಂದು ಶಂಕಿಸಿ ಮಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿಂಚೋಳಿಯ ಸಾರ್ವಜನಿಕ ಆಸ್ವತ್ರೆಯಲ್ಲಿ ಮರಣೋತ್ತರ ಪರಿಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಮಹ್ಮದ್ ಮುನೀರ ಅಹೇದ. ಸಂಜುಕುಮಾರ ಚವ್ಹಾಣ. ರಾಹುಲ್ ಅಧಿಕಾರಿಗಳಿಗೆ ಮೃತ ಕುಟುಂಬಸ್ಥರು ತಮಗೆ ನ್ಯಾಯ ದೋರಕಿಸಿಕೊಡುವಂತೆ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಿಎಸ್‍ಐ ಉಪೇಂದ್ರಕುಮಾರ ಮತ್ತು ಪೆÇಲೀಸ್ ಸಿಬ್ಬಂದಿಗಳು ಇದ್ದರು.