ಸೇಡಂ, ಮೇ,29; ಹಗಲು ರಾತ್ರಿ ಎನ್ನದೆ ದುಡಿಯುವ ರೈತ
ಸಕಲ ಜೀವರಾಶಿಗೂ ಅನ್ನ ನೀಡುವಂತಹ ರೈತನ ಕಾಯಕ ಸರ್ವ ಶ್ರೇಷ್ಠವಾದದ್ದು ಹಾಗೂ ಶ್ರೀಮಂತ ವ್ಯಕ್ತಿತ್ವ ಅವರದು ಎಂದು ಶ್ರೀಮಂತ ಚಿತ್ರದ ನಟ ಶ್ರೀಕಾಂತ್ ಬಣ್ಣಿಸಿದರು. ತಾಲೂಕಿನ ಕುಕುಂದಾ ಗ್ರಾಮದಲ್ಲಿ ಆಯೋಜಿಸಿದ್ದ ವಿಕಾಸ ಅಕಾಡೆಮಿ ಕಲಬುರಗಿ ಮತ್ತು ಕೃಷಿ ಇಲಾಖೆ ಸೇಡಂ ಸಂಯುಕ್ತ ಆಶ್ರಯದಲ್ಲಿ ನಡೆದ ಮುಂಗಾರು ಹಂಗಾಮಿನ ರೈತರ ತರಬೇತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿ ಜಿಲ್ಲಾ ರಾಜ್ಯ ರಾಷ್ಟ್ರ ಬೆಳವಣಿಗೆಗೆ ಸಹಕಾರವಾಗುತ್ತದೆ ಎಂದು ಹೇಳಿದರು.
ಈ ವೇಳೆಯಲ್ಲಿ ರೈತ ಗುಂಡಪ್ಪ ಮಾತಾಡಿ ಸಾವಯುವ ಕೃಷಿ ಯಿಂದ ತಾವು ಸಾಧಿಸಿ ತೋರಿಸಿದ ಬಗ್ಗೆ ಸವಿವರವಾಗಿ ತಿಳಿಸಿದರು. ಕೇವಲ 3.5 ಎಕರೆ ಜಮೀನಿನಲ್ಲಿ ಸಾವಯುವ ಕೃಷಿ ಮೂಲಕ ಲಕ್ಷ ಗಟ್ಟಲೆ ಲಾಭ ಪಡೆಯುತ್ತಿದ್ದಾರೆ. ಅದೆ ರೀತಿ ಸೋಮನಾಥ್ ರೆಡ್ಡಿ ಪುರಮ ಕೊಡ್ಲಾ ಅವರು, ಬೆಳೆ ಪರಿವರ್ತನೆ ಹಾಗೂ ಸರಿಯಾದ ಬೇಸಾಯ ಕ್ರಮಗಳನ್ನು ಅನುಸರಿಸಿ ಲಾಭಧಾಯಕ ಕೃಷಿ ಮಾಡಿದ ಅನುಭವ ಹಂಚಿಕೊಂಡರು. ಪ್ರಕಾಶ್ ರಾಥೋಡ್ ಕೃಷಿ ಅಧಿಕಾರಿ ಮಾತನಾಡಿ ತೊಗರಿಬೇಳೆ ನಟೇರೋಗದಿಂದ ಪಾರಾಗಲು ಅನುಸರಿಸಬೇಕಾದ ಪದ್ಧತಿಗಳನ್ನು ತಿಳಿಸಿದರು.ಬೆಳೆ ಪರಿವರ್ತನೆ, ಬಿಜೋಪಚಾರ, ಅಂತರ ಬೇಸಾಯ, ಮಿಶ್ರ ಬೇಸಾಯ, ಸಮಗ್ರ ಬೇಸಾಯ ಪದ್ದತಿಯನ್ನು ಅಳವಡಿಸಿಕೊಂಡರೆ ಉತ್ತಮ ಆಧಾಯ ಪಡೆಯಬಹುದು ಎಂದು ತಿಳಿಸಿದರು.
ಈ ವೇಳೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿ ಪ್ರಕಾಶ್ ರಾಠೋಡ್,ನಾಗೇಂದ್ರಪ್ಪ , ಕೃಷಿ ಪಂಡಿತ ರೈತ ಸೋಮನಾಥ್ ರೆಡ್ಡಿ, ವಿಕಾಸ್ ಅಕಾಡೆಮಿ ಸಂಚಾಲಕರಾದ ಭಗವಂತ ರಾವ್ ಪಾಟೀಲ್ ಇದ್ದರು.