(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31: ನಗೆದ ಎಪಿಎಂಸಿ ಮಾರಿಕಟ್ಟೆಗೆ ಬರುವ ರೈತರಿಗೆ ಊಟದ ವ್ಯವಸ್ಥೆ ಮಾಡುವ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ರೈತಣ್ಣನ ಊಟದ ಯೋಜನೆಗೆ
ಸಮಾಜ ಸೇವಕ, ಬಿಜೆಪಿ ಮುಖಂಡ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ, ರಾಜ್ಯ ಕೃಷಿ ಪರಿಕಾರ ಮಾರಾಟಗಾರ ಉಪಾಧ್ಯಕ್ಷರು, ಮಾತ್ತು ಜಿಲ್ಲಾ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ ಅವರು ತಮ್ಮ 56 ನೇ ವರ್ಷದ ಜನ್ಮದಿನದ ಅಂಗವಾಗಿ ಒಂದು ಲಕ್ಷ ಒಂದು ರೂಗಳನ್ನು ದೇಣಿಯಾಗಿ ನೀಡಿದ್ದಾರೆ.
ಜನ್ಮ ದಿನದ ಹೆಸರಲ್ಲಿ ದುಂದು ವೆಚ್ಚ ಮಾಡದೆ ರೈತಣ್ಣನ ಊಟದ ಯೋಜನೆಗೆ ಸಹಕಾರ ನೋಡಬೇಕಿದೆಂದು ಹೇಳಿದರು.
ಈ ಸಂದರ್ಭದಲ್ಲಿ ಅವರ ಪುತ್ರ, ಸಿದ್ದಮ್ಮನಹಳ್ಳಿ ಹನುಮಂತರೆಡ್ಡಿ, ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳು ಇದ್ದು ರೈತರಿಗೆ ಊಟ ಬಡಿಸಿದರು.
One attachment • Scanned by Gmail