ರೈತಣ್ಣನ ಊಟಕ್ಕೆ ನೆರವು
ಗಣಪಾಲ್ ಐನಾಥ್ ರೆಡ್ಡಿಗೆ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,18-  ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲಾ  ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ    ರೈತಣ್ಣನ  ಊಟ ಯೋಜನೆಗೆ ಒಂದು ಲಕ್ಷ ರೂ ನೆರವು ನೀಡಿದ ಗಣಪಾಲ ಐನಾಥರೆಡ್ಡಿ ಅವರನ್ನು ಸನ್ಮಾನಿಸಲಾಯಿತು. 
ಯೋಜನೆಯು ಒಂದು ವರ್ಷ  ಪೂರೈಸಿದೆ.  95 ಸಾವಿರ ರೈತರು  ಊಟ  ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ  ಗಣಪಾಲ ಐನಾತರೆಡ್ಡಿಯವರನ್ನು  ವಾಣಿಜ್ಯ ಕೈಗಾರಿಕಾ ಸಂಸ್ಥೆಯಿಂದ  ಸನ್ಮಾನಿಸಿದೆ.  ಎಫ್ ಕೆ ಸಿಸಿ  ರಾಜ್ಯ  ಅಧ್ಯಕ್ಷ ಗೋಪಾಲ್ ರೆಡ್ಡೆ,  ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ. ಮತ್ತು ಸದಸ್ಯರು  ಉಪಸ್ಥಿತರಿದ್ದರು.