ರೇಸ್ ಶಾಲೆ : ವಿದ್ಯಾರ್ಥಿಗಳಿಂದ ಪಥ ಸಂಚಲನ – ಸಾಂಸ್ಕೃತಿಕ ಕಾರ್ಯಕ್ರಮ

ರಾಯಚೂರು.ಜು.೧೫- ರೇಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮತದಾನದ ಮೂಲಕ ಆಯ್ಕೆಗೊಂಡ ಶಾಲಾ ಸಂಸತ್ತ್ತಿನ ಪದಾಧಿಕಾರಿಗಳಿಗೆ ಆಯೋಜಿಸಿದ ಪದವಿ ಅಲಂಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಪಥ ಸಂಚಲನ (ಮಾರ್ಚ ಫಾಸ್ಟ್) ಗಾಯನ ಮತ್ತು ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಯಚೂರಿನ ಮಾಜಿ ಶಾಸಕರಾದ ಎ.ಪಾಪರೆಡ್ಡಿ ಅವರು ಶಾಲೆಯ ನಾಯಕನಾಗಿ ಆಯ್ಕೆಗೊಂಡ ಕುಮಾರ್ ಜಯೇಶ್ ವಿಠಲ್ ಕುಮಾರಿ ಶ್ರಾವ್ಯ ಕಿಲ್‌ಕಿಲೆ ಮತ್ತು ಇತರ ಪದಾಧಿಕಾರಿಗಳಿಗೆ ಪದವಿಗಳನ್ನು ಅಲಂಕರಿಸಿ ಪ್ರತಿಜ್ಞೆ ವಿಧಿ ಬೋಧಿಸಿ ಶಾಲಾ ಸಂಸತ್ತುಗಳು ವಿದ್ಯಾರ್ಥಿಗಳಿಲ್ಲಿ ನಾಯಕತ್ವದ ಗುಣ, ಜವಜ್ದಾರಿಯನ್ನು ಬೆಳೆಸಲು ಮತ್ತು ರಾಷ್ಟ್ರಕ್ಕೆ ಉತ್ತಮ ಪೌರರನ್ನು ನೀಡಲು ಸಹಕಾರಿಯಾಗಿವೆ ಎಂದು ತಿಳಿಸಿದರು. ನಂತರ ರೇಸ್ ಸಂಸ್ಥೆಯ ಅಧ್ಯಕ್ಷರಾದ ಕೊಂಡಕೃಷ್ಣಮೂರ್ತಿ ಅವರು ಮಾತನಾಡಿ ” ಶಾಲಾ ಸಂಸತ್ತುಗಳಿಗೆ ನಡೆಸುವ ಚುನಾವಣೆಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ನೈಜ್ಯ ಅನುಭವವನ್ನು ನೀಡುವುದಲ್ಲದೆ. ನಾಗರಿಕ ಪ್ರಜ್ಞೆ ಬೆಳಸುತ್ತವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೇಸ್ ಸಂಸ್ಥೆಯ ಖಜಾಂಚಿ ಷಣ್ಮುಖಪ್ಪ, ಜಂಟಿ ಕಾರ್ಯದರ್ಶಿ ಎಂ. ವೆಂಕಟೇಶ್, ಸದಸ್ಯರುಗಳಾದ ಶೆಟ್ಟಿನಾಗರಾಜ, ಎಮ್. ಆರ್ ಕೃಷ್ಣ, ನಗರಸಭೆ ಮಾಜಿ ಸದಸ್ಯರಾದ ಮಲ್ಲೇಶ ಹಾಗೂ ಶಾಲೆಯ ಕಾರ್ಯ ನಿರ್ದೇಶಕರಾದ ಎನ್. ಚಂದ್ರ ಮೋಹನ್ ರೆಡ್ಡಿ ಮತ್ತು ಶಾರದಾ ದೇವಿ ಹಾಗೂ ಪ್ರಾಂಶುಪಾಲರಾದ ಭಾವನಾ ದೈಲಾನಿ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.