ರೇಸ್ ಚಾಣಕ್ಯ ಶಾಲೆಯ ಭರತ್ ಉತ್ತಮ ಸಾಧನೆ

ರಾಯಚೂರು.ಮಾ.೧೫- ರೇಸ್ ಚಾಣಕ್ಯ ಶಾಲೆಯ ೫ ತರಗತಿಯ ವಿದ್ಯಾರ್ಥಿ ಜಿ.ಕೆ.ಭರತ್ ಯಾದವ ಅಖಿಲ ಭಾರತ ಸೈನಿಕ್ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುತ್ತಾನೆ. ೩೦೦ ಅಂಕಗಳಿಗೆ ೨೨೨ ಅಂಕಗಳನ್ನು ಪಡೆದಿರುತ್ತಾನೆ.
ರೇಸ್ ಚಾಣಕ್ಯ ಶಾಲೆಯ ವಿಶೇಷ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಆಗಿರುತ್ತಾನೆ. ಶಿಕ್ಷಕಿ ಗಾಯತ್ರಿ ರವರು ತರಬೇತಿ ನೀಡಿರುತ್ತಾರೆ. ಶ್ರೀದೇವಿ ಕುಲಕರ್ಣಿಯವರು ಪ್ರೋತ್ಸಾಹ ನೀಡಿರುತ್ತಾರೆ. ವಿದ್ಯಾರ್ಥಿ ಜಿ.ಕೆ.ಭರತ್ ಯಾದವ ಫಲಿತಾಂಶಕ್ಕೆ ಶಾಲೆಯ ಆಡಳಿತ ಮಂಡಳಿ, ಶಾಲೆಯ ವಿಶೇಷ ತರಬೇತಿ ತಂಡ ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ತಿಳಿಸಿರುತ್ತಾರೆ.