ರೇಸ್ ಚಾಣಕ್ಯ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

ರಾಯಚೂರು,ಜು.೨೭-ರೇಸ್ ಚಾಣಕ್ಯ ಶಾಲೆಯಲ್ಲಿ ನಿನ್ನೆ ಬೆಳಿಗ್ಗೆ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮೇಜರ್ ಡಾ. ದೀಪಶ್ರೀ ಮಾತನಾಡಿ ಮಕ್ಕಳು ಕಲಿಕೆಯ ಜೊತೆಗೆ ದೇಶ ಭಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು.
ಇಂದಿನ ಮಕ್ಕಳು ನಾಳಿನ ಪ್ರಜೆಗಳು ನಾಳೆ ಪ್ರಜೆಗಳಾಗಿ ಬೆಳೆಯುವುದರೊಳಗೆ ತಮ್ಮಲ್ಲಿ ದೇಶದ ಬಗ್ಗೆ ಕಾಳಜಿ, ಶ್ರದ್ಧೆ ಮತ್ತು ಪ್ರೀತಿಯನ್ನು ಬೇಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿ ನಾವೆಲ್ಲ ಕ್ಷೇಮವಾಗಿದ್ದೇವೆ ಅಂದರೆ ಅದಕ್ಕೆ ದೇಶದ ಗಡಿಯಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೈನಿಕರು ಕಾರಣ, ತಮ್ಮ ಜೀವದ ಹಂಗು ತೊರೆದು ಹಿಮ ಗಡ್ಡೆಗಳಲ್ಲಿ, ಕಣಿವೆ ಬೆಟ್ಟಗಳಲ್ಲಿ ಉಗ್ರರ ದಾಳಿ ಎದುರಿಸುವ ಕಾಯಕದ ಶ್ರಮ ನಾವು ಎಷ್ಟು ಕೊಂಡಾಡಿದರೂ ಸಾಲದು.ಕಾರ್ಗಿಲ್ ವಿಜಯೋತ್ಸವ ಇಂದು ಶಾಲೆಯಲ್ಲಿ ಆಚರಿಸುವ ಮೂಲಕ ಮಕ್ಕಳಲ್ಲಿ ದೇಶ ಪ್ರೇಮ ಬಿತ್ತುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ನವೋದಯ ವೈದ್ಯಕೀಯ ಕಾಲೇಜು ಉಪನ್ಯಾಸಕರಾದ ಶಂಕರ ಕುರುಗೋಡ, ಎನ್ ಸಿ ಸಿ ಬಟಾಲಿಯನ್ ಸುಬೇದಾರ, ಶ್ರೀ ಕೃಷ್ಣನ್ ಮತ್ತು ವೆಟರೆನೇರ್ ವಾರಿಯರ್ ಆದ ವಿಜಯಾನಂದ ರವರು ಮಾತನಾಡಿ ದೇಶ ಸೇವೆಯಲ್ಲಿ ಸೈನಿಕರ ಪಾತ್ರ ಹೇಗಿರುತ್ತದೆ ಅವರ ಜೀವನ ಶೈಲಿ ಹೇಗಿರುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರೇಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಂಡ ಕೃಷ್ಣಮೂರ್ತಿ, ಕೋಶಾಧ್ಯಕ್ಷ ವೆಂಕಟಾಪೂರು ಷಣ್ಮುಖಪ್ಪ, ನಿರ್ದೇಶಕರುಗಳಾದ ಎಂ.ಆರ್.ಕೃಷ್ಣ, ಕೆ.ಭೀಮಾಶಂಕರ, ಜಿ.ಆರ್.ಲಕ್ಷ್ಮೀ ರೇಸ್ ಚಾಣಕ್ಯ ಶಾಲೆಯ ಅಕಾಡೆಮಿ ಚೇರ್ಮನ್ ಡಾ. ವಿ.ಶ್ರೀಧರ ರೆಡ್ಡಿ ,ರವರು ಉಪಸ್ಥಿತಿ ಇದ್ದರು. ಶಾಲೆಯ ಮುಖ್ಯೋಪಾಧ್ಯಾಯನಿ ವಿ.ಪರಿಮಳ ರೆಡ್ಡಿ , ಗಾಯತ್ರಿ ಆನಂದ ಉಪಸ್ಥಿತಿ ಇದ್ದರು. ದೇಶ ಭಕ್ತಿ ಗೀತೆಗೆ ಮಕ್ಕಳು ಸೈನಿಕ ಉಡುಗೆ ತೊಟ್ಟು ಪ್ರದರ್ಶನ ಮಾಡಿರುವದು ಆಕರ್ಷಣೀಯವಾಗಿ ಕಂಡು ಬಂದಿತು.ಪ್ರತಿಮಾ ಹಿರೇಮಠ ಸ್ವಾಗತಿಸಿದರು ಜಲಜಾ ರವರು ನಿರೂಪಿಸಿದರು ಅಸ್ರಾ ಶಾಹೀನ್ ವಂದಿಸಿದರು.