ರೇಸ್ ಕಾನ್ಸೆಪ್ಟ್ ಶಾಲೆಯ ವಾರ್ಷಿಕೋತ್ಸವ: ರೇಸ್ ಸಂಭ್ರಮ


ರಾಯಚೂರು,ಜ.೧೪- ರೇಸ್ ಕಾನ್ಸೆಪ್ಟ್ ಶಾಲೆ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವ ರೇಸ್ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದಿನಾಂಕ ೧೧ ಪ್ರಾಥಮಿಕ ಶಾಲಾ ಸಮಾರಂಭವನ್ನು ಉದ್ಘಾಟಿಸಿದ ಎಚ್. ವಿಶ್ವನಾಥ್ ಮಾಜಿ ಶಿಕ್ಷಣ ಮಂತ್ರಿ ಹಾಗೂ ಹಾಲಿ ಎಂಎಲ್‌ಸಿ ಮಾತನಾಡಿ ರಾಯಚೂರಿನಲ್ಲಿ ಇಂತಹ ಶಾಲೆ ಇರುವುದು ಒಂದು ಸಂತೋಷದ ಸಂಗತಿ ಇಲ್ಲಿ ಮಕ್ಕಳಿಗೆ ಪಾಠಗಳಷ್ಟೇ ಅಲ್ಲದೆ, ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಲಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಂಜನೇಯ ಬಿ.ಟಿ ಉದ್ಘಾಟಕರಾಗಿ ಹಾಗೂ ಡಾ.ರಾಮ್ ಅರಸಿದ್ದಿ ಲೋಕಾಯುಕ್ತ ಎಸ್ಪಿ , ಬಿ.ಇ.ಒ ಚಂದ್ರಶೇಖರ್ ಭಂಡಾರಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಹಣವನ್ನು ಬಹುಮಾನವಾಗಿ ನೀಡಿ ಗೌರವಿಸಿದರು.
ಸತತವಾಗಿ ಎರಡನೇ ದಿನ ಪ್ರೌಢಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಯುವ ಮುಖಂಡರಾದ ರವಿ ಬಸವರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಯಚೂರಿನಲ್ಲಿ ಇಂತಹ ವಿಶಾಲವಾದ ಮೈದಾನ ದೊಡ್ಡ ಕಟ್ಟಡ ಹಾಗೂ ಒಳ್ಳೆಯ ಶಿಕ್ಷಣ ಕೊಡುವಂತಹ ಶಾಲೆಯಂದರೆ ರೇಸ್ ಕಾನ್ಸೆಪ್ಟ್ ಶಾಲೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ತರಗತಿಗಳನ್ನು ಹಾಗೂ ಎನ್.ಇ.ಪಿ. ಪ್ರಕಾರ ಶಾಲೆಗಳನ್ನು ನಡೆಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವೃಷ ಬೇಂದ್ರಯ್ಯ ಉಪ ನಿರ್ದೇಶಕರು ರಾಯಚೂರು, ಲಲಿತ ಕಡಗೊಲ್ ಆಂಜನೇಯ ಅಧ್ಯಕ್ಷರು ನಗರ ಸಭೆ ರಾಯಚೂರು ಮತ್ತು ದತ್ತಾತ್ರೇಯ ಕರ್ನಾದ್ ಡಿವೈಎಸ್ಪಿ, ಮಸ್ಕಿ ನಾಗರಾಜ್ ಹಿರಿಯ ವಕೀಲರು, ಡಾ. ಸುರೇಶ್ ಸಗರದ್ ಅವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಎರಡನೇ ದಿನವೂ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ನೆನಪಿನ ಕಾಣಿಕೆ ಹಾಗೂ ಹಣದ ರೂಪದಲ್ಲಿ ಬಹುಮಾನವನ್ನು ಕೊಟ್ಟು ಗೌರವಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ವೀಕ್ಷಿಸಿದ ಪಾಲಕರು ಸಂತೋಷ ಮುಗಿಲು ಮುಟ್ಟಿತು.
ಕಾರ್ಯಕ್ರಮದಲ್ಲಿ ರೇಸ್ ಸಂಸ್ಥೆಯ ಅಧ್ಯಕ್ಷರಾದ ಎಂ. ಕೊಂಡ ಕೃಷ್ಣಮೂರ್ತಿ, ಉಪಾಧ್ಯಕ್ಷರು ಸಾವಿತ್ರಿ ಪುರುಷೋತ್ತಮ್, ಕಾರ್ಯದರ್ಶಿಗಳಾದ ಎಸ್.ವೆಂಕಟ ಕೃಷ್ಣನ, ಖಜಾಂಚಿಗಳಾದ ಷಣ್ಮುಖಪ್ಪ, ಸಂಯುಕ್ತ ಕಾರ್ಯದರ್ಶಿ ಎಂ.ವೆಂಕಟೇಶ್ ಶಾಲೆಯ ನಿರ್ದೇಶಕರುಗಳಾದ ಎನ್.ಚಂದ್ರಮೋಹನ್ ರೆಡ್ಡಿ, ಎನ್.ಶಾರದಾದೇವಿ ಹಾಗೂ ಸದಸ್ಯರುಗಳಾದ ಶೆಟ್ಟಿ ನಾಗರಾಜ್ ವಿ. ನಾಗಿ ರೆಡ್ಡಿ, ಎಂ.ಆರ್. ಕೃಷ್ಣ, ಕೆ.ಭೀಮಶಂಕರ್, ಎಂ. ಆರ್. ಪವನ್, ಎಸ್. ಪ್ರಸಾದ್ ಹಾಗೂ ಜಿ.ಆರ್. ಲಕ್ಷ್ಮಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಭಾವನಾ ಡೈಲಾನಿ ಮತ್ತು ಶಾಲೆಯ ಎಲ್ಲ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ರುಸ್ಮಾದ ಸದಸ್ಯರುಗಳು ಅತ್ಯಂತ ಸಂತೋಷದಿಂದ ಪಾಲ್ಗೊಂಡಿದ್ದರು.