ರೇಸ್ ಕಾನ್ಸೆಪ್ಟ್ ಶಾಲೆಗೆ ಶೇ. ನೂರು ಫಲಿತಾಂಶ

ರಾಯಚೂರು.ಜು.೨೪-ನಗರದ ರೇಸ್ ಕಾನ್ಸೆಪ್ಟ್ ಸಿಬಿಎಸ್‌ಇ ಶಾಲೆಗೆ ೧೦ನೇ ತರಗತಿಯ ವಿದ್ಯಾರ್ಥಿಗಳು ೨೦೨೧-೨೨ ನೆಯ ಸಾಲಿನ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ಆರ್ಯನ್ ಜೈನ್ ಶೇ.೯೬.೪ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ಅಮೋಘ ಎಸ್ ಶೇ. ೯೬ ಅಂಕ ಪಡೆದು ದ್ವಿತೀಯ, ವಿ.ಹಾಸೀನಿ ರೆಡ್ಡಿ ಶೇ. ೯೫.೮ ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ಶಾಲೆಯ ಒಟ್ಟು ೧೫೪ ವಿದ್ಯಾರ್ಥಿಗಳಲ್ಲಿ ೮೮ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೫೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ೧೫ ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದವನ್ನು ಸಂಸ್ಥೆಯ ಅಧ್ಯಕ್ಷರಾದ ಎಮ್ ಕೊಂಡ ಕೃಷ್ಣಮೂರ್ತಿ, ಕಾರ್ಯದರ್ಶಿ ಎಸ್ ವೆಂಕಟಕೃಷ್ಣನ್, ಕಾರ್ಯ ನಿರ್ದೇಶಕರಾದ ಎನ್ ಚಂದ್ರ ಮೋಹನ್ ರೆಡ್ಡಿ ಮತ್ತು ಎನ್ ಶಾರದಾ ದೇವಿ, ಮತ್ತು ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಶಾಲೆಯ ಪ್ರಾಂಶುಪಾಲರು ಭಾವನ ದೈಲಾನಿ ಅವರು ಅಭಿನಂದಿಸಿದ್ದಾರೆ.