ರೇಸ್ ಕಾನ್ಸೆಪ್ಟ್ ಶಾಲೆ:ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ

ರಾಯಚೂರು.ಸೆ.೨೫-೨೩ನೇ ಸೆಪ್ಟೆಂಬರ್ ೨೦೨೧ ರಂದು ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ನಡೆದ ಬಿಗಿನ್ ಅಪ್ ಪರಿಶೋಧನ ಮತ್ತು ಇಂಟಲಿಜೆನ್ಸ್ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ರ್ಚಾಕೂಟ,೨೦೨೧ ಕಾರ್ಯಕ್ರಮದಲ್ಲಿ ರೇಸ್ ಕಾನ್ಸೆಪ್ಟ್ ಶಾಲೆಗೆ ೨೦೨೧ ನೇ ವರ್ಷದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಹಾಗೂ ಭರವಸೆಯ ಸಂಸ್ಥೆ ಎಂಬ ಪ್ರಶಸ್ತಿಯನ್ನು ಕೊಡಲಾಯಿತು ಹಾಗೂ ಕೊರೋನಾ ಸಮಯದಲ್ಲಿ ಆನ್‌ಲೈನ್ ಮೂಲಕ ಉತ್ತಮ ವಿದ್ಯಾ ಬೋಧನಾ ಪ್ರಶಸ್ತಿಯನ್ನು ಸಹ ಕೊಡಲಾಯಿತು.
ಬಿಗಿನ್ ಅಪ್ ಸಂಸ್ಥೆಯ ಅಧ್ಯಕ್ಷರಾದ ಡಾ.ನಂದ ಗೋಪಾಲ ನಾಯಕ, ಪ್ರಖ್ಯಾತ ಪರಿಶೋಧಕರು ಡಾ.ರಾಜಾ ವಿಜಯಕುಮಾರ್ ಹಾಗೂ ಡಾ.ಅಜಯ್‌ಚಂದ್ರನ್ ಅವರಿಂದ ಈ ಪ್ರಶಸ್ತಿಗಳನ್ನು ರೇಸ್ ಸಂಸ್ಥೆಯ ಪರವಾಗಿ ಕಾರ್ಯನಿರ್ದೇಶಕರಾದ ಚಂದ್ರಮೋಹನ್ ರೆಡ್ಡಿ ಹಾಗೂ ಶಾರದಾದೇವಿ ಅವರಿಗೆ ನೀಡಿ ಗೌರವಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ಭಾವನಾ ದೈಲಾನಿ ಅವರು ಮಾತನಾಡಿ ನಮ್ಮ ರೇಸ್ ಸಂಸ್ಥೆಯನ್ನು ಅತ್ಯುತ್ತಮ ಶಾಲೆ ೨೦೨೧ ಎಂದು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು.
ರೇಸ್ ಸಂಸ್ಥೆಯ ಅಧ್ಯಕ್ಷರಾದ ಕೊಂಡ ಕೃಷ್ಣಮೂರ್ತಿ, ಕಾರ್ಯದರ್ಶಿ ಎಸ್. ವೆಂಕಟಕೃಷ್ಣನ್ ಅವರು ಉತ್ತರ ಕರ್ನಾಟಕದಲ್ಲಿ ಅತಿ ಅಲ್ಪಾವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಶಿಕ್ಷಣ ಸಂಸ್ಥೆ ಎಂದು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿ ಸಂಸ್ಥೆಯ ಎಲ್ಲಾ ಶಿಕ್ಷಕವೃಂದಕ್ಕೂ ಹಾಗೂ ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಎನ್. ಚಂದ್ರಮೋಹನ್ ರೆಡ್ಡಿ ಅವರು ಮಾತನಾಡಿ ಈ ಪ್ರಶಸ್ತಿ ನಮ್ಮ ಸಂಸ್ಥೆಯ ಶಿಕ್ಷಕರ ದಕ್ಷತೆ ಹಾಗೂ ಪರಿಶ್ರಮದ ಫಲ ಎಂದು ಹೇಳುತ್ತಾ ಸಂಸ್ಥೆಯ ಮೇಲೆ ಭರವಸೆಯಿಟ್ಟಂತಹ ಎಲ್ಲ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ, ಖಜಾಂಚಿ ವಿ. ಷಣ್ಮುಖಪ್ಪ, ಸಂಯುಕ್ತ ಕಾರ್ಯದರ್ಶಿ ಎಮ್. ವೆಂಕಟೇಶ್, ಸದಸ್ಯರಾದಂಥ ಶೆಟ್ಟಿ ನಾಗರಾಜ ಮತ್ತು ಸಂಸ್ಥೆಯ ಇತರ ಸದಸ್ಯರು ಸಂತೋಷವನ್ನು ವ್ಯಕ್ತಪಡಿಸಿ ಶಿಕ್ಷಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.