ರೇಷ್ಮೆ ಸಹಕಾರ ಸಂಘಧ ಸರ್ವಸದಸ್ಯರ ಸಭೆ

ಆನೇಕಲ್. ಸೆ. ೨೫ – ಸರ್ಜಾಪುರ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ೪೭ ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿ ಗೌರವ ಪೂರ್ವಕ ವಾಗಿ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ದೊರೆಸ್ವಾಮಿ ನಾಯ್ಡು, ಪಿಎಲ್ ಡಿ ಆಂಜಿನಪ್ಪ, ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ,ಉಪಾಧ್ಯಕ್ಷ ವೆಂಕಟರೆಡ್ಡಿ, ನಿದೇಶಕರುಗಳಾದ ಮುತ್ತಾನಲ್ಲೂರು ವಿಶ್ವನಾಥ್ ರೆಡ್ಡಿ, ಎಸ್.ವಿ.ಟಿ. ಮಂಜುನಾಥ್ ರೆಡ್ಡಿ, ವಿ. ಮುರಳಿಕೃಷ್ಣ, ಕೆ.ವಿ.ಕೇಶವ, ನಂದಕುಮಾರ್, ರಾಮಸಾಗರ ಮಂಜುನಾಥ್, ಸಂಪಂಗಪ್ಪ, ಅಂಬರೀಶ್, ವೆಂಕಟೇಶ್, ಶ್ರೀಮತಿ ಕಲಾ, ಶ್ರೀಮತಿ ವಿನೋದ, ಸಿಇಓ ನಂಜಪ್ಪ ಮತ್ತು ಸಂಘದ ಸದಸ್ಯರು, ಸಿಬ್ಬದಿ ವರ್ಗದವರು ಭಾಗವಹಿಸಿದ್ದರು.