ಕಲಬುರಗಿ:ಜೂ.22:ಅಂತರಾಷ್ಟ್ರೀಯ 9ನೇ ಯೋಗ ದಿನಾಚರಣೆಯ ನಿಮಿತ್ಯವಾಗಿ ರೇಷ್ಮೀ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಲ್ಬುರ್ಗಿ ಹಾಗೂ ವಿವೇಕ್ ಜಾಗೃತ ಯೋಗ ವಿದ್ಯಾ ಪೀಠ ಕಲಬುರ್ಗಿ ಇವರ ಸಂಯೋಗದಲ್ಲಿ ಯೋಗ ದಿನಾಚರಣೆಯ ನಿಮಿತ್ಯ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಾಗಿ , ಮತ್ತು ಶಿಕ್ಷಕ ವರ್ಗದವರಿಗಾಗಿ 6 ದಿವಸಗಳ ಕಾಲ ಯಶಸ್ವಿಯಾಗಿ ಯೋಗ ತರಬೇತಿ ನೀಡಲಾಯಿತು ಮತ್ತು ಅದರ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಇಂದು ಅಂತರಾಷ್ಟ್ರೀಯ 9ನೇ ಯೋಗ ದಿನಾಚರಣೆಯನ್ನು ನಮ್ಮ ಕಾಲೇಜಿನ ಬಯಲು ಆವರಣದಲ್ಲಿ ಆಚರಣೆ ಮಾಡಲಾಯಿತು. ಈ ಯೋಗ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ !! ಭಾರತಿ ಎನ್ ರೇಷ್ಮಿ ಹಾಗೂ ಕಾರ್ಯದರ್ಶಿಗಳಾದ ಶ್ರೀ ಶರದ್ ರೇಷ್ಮಿ ಮತ್ತು ಶಶಿರ ರೇಷ್ಮಿ ಹಾಗೂ ನ್ಯಾಕ್ ಸಂಯೋಜಕರಾದ ಡಾ!! ಗೀತಾ ಆರ್ .ಎಂ .ಹಾಗೂ ಪ್ರಾಂಶುಪಾಲರುಗಳಾದ ಡಾ!! ರಾಜಶೇಖರ್ ಶಿರವಾಳಕರ್, ಶ್ರೀ ಶರಣಗೌಡ ಪಾಟೀಲ್, ಡಾ!! ರೇವಣಸಿದ್ದಯ್ಯ ಹಿರೇಮಠ್ ,ಶ್ರೀಮತಿ ಜಯಲಕ್ಷ್ಮಿ ಪಾಟೀಲ್, ಶ್ರೀಮತಿ ವೀಣಾ ಮೋದಿ , ಶ್ರೀಮತಿ ಸುರೇಖಾ ಪಾಟೀಲ್, ಹಾಗೂ ಎಲ್ಲಾ ಉಪನ್ಯಾಸಕರುಗಳು , ವಿದ್ಯಾರ್ಥಿಗಳು ಭಾಗವಹಿಸಿದ್ದರು.