ರೇಷ್ಮಿ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ

ಕಲಬುರಗಿ,ಮಾ.20: ನಗರದ ರೇಷ್ಮಿ ಶಿಕ್ಷಣ ಸಂಸ್ಥೆಯ ಅಡಿಯ ಕು. ಶರಣೇಶ್ವರಿ ರೇಷ್ಮಿ ಮಹಿಳಾ ಹಾಗೂ ಶ್ರೀ ಮುರುಘ ರಾಜೇಂದ್ರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎ.ಕೆ.ಹೆಚ್.ಎಂ ಉಪನ್ಯಾಸಕರು ಹಾಗೂ ಕಾರ್ಯದರ್ಶಿ ಡಾ. ಶೈಲಜಾ ಬಾಗೇವಾಡಿ, ಮತ್ತು ಸಂಸ್ಥೆಯ ಅಧ್ಯಕ್ಷರಾದ ಡಾ. ಭಾರತಿ ಎನ್. ರೇಷ್ಮಿ ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಗೀತಾ ಆರ್.ಎಂ. ವಹಿಸಿಕೊಂಡಿದ್ದರು.
É ಸಂಸ್ಥೆಯ ಕಡೆಯಿಂದ ನೀಡಲಾಗುವ ಕಾಯಕ ರತ್ನ ಪ್ರಶಸ್ತಿಯನ್ನು ನಂದೂರ (ಕೆ) ಅಂಗನವಾಡಿ ಕಾರ್ಯಕರ್ತೆ
ಬಾಬಮ್ಮ ಮೈಲಾರಿ, ಸೇವಾ ರತ್ನ ಪ್ರಶಸ್ತಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಪೆÇಲೀಸ ಠಾಣೆ ಮಹಿಳಾ ಪೆÇಲೀಸ ಪೇದೆ ರೇಣುಕಾ ಹೆಳವರ್, ಮತ್ತು ಸ್ತ್ರೀ ರತ್ನ ಪ್ರಶಸ್ತಿಯನ್ನು ದೋರನಳ್ಳಿ ಸಾಂಪ್ರದಾಯಿಕ ಪ್ರಸೂತಿ ತಜ್ಞೆ ಚಂದಮ್ಮ ದೇವಿಕೇರಿ ಅವರಿಗೆ ನೀಡಿ ಗೌರವಿಸಲಾಯಿತು.ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ ಸಿ. ಪಾಟೀಲ ನಿರ್ವಹಿಸಿದರು. ಸಂಸ್ಥೆಯ ವಿವಿಧ ಪ್ರಕಲ್ಪಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಂಸ್ಕøತಿಕ ಕಾರ್ಯಕ್ರಮಗಳ ಸಂಯೋಜನೆಯನ್ನು ಕುಮಾರಿ. ಶೈನಿ ರವರು ನಡೆಸಿಕೊಟ್ಟು ವಂದನಾರ್ಪಣೆ ಮಾಡಿದರು.