ರೇಷ್ಮಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ರಕ್ತದಾನ ಶಿಬಿರ

ಕಲಬುರಗಿ,ಜೂ.21-ನಗರದ ಕುಸನೂರ ರಸ್ತೆಯಲ್ಲಿರುವ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಬಿ.ಇಡಿ ಮತ್ತು ಎಮ್.ಇಡಿ ಕಾಲೇಜು ಮತ್ತು ಜಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ರೇಷ್ಮಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಬಿ.ಇಡಿ ಮತ್ತು ಎಮ್.ಇಡಿ ಪ್ರಶಿಕ್ಷಣಾರ್ಥಿಗಳು ಸ್ವ-ಇಚ್ಛೆಯಿಂದ ರಕ್ತದಾನ ಮಾಡಿದರು. ಡಾ.ಚಂದ್ರಕಾಂತ ನರಬೋಳಿ, ಡಾ.ಮೇಘಾ, ಸುಗಲಾರಾಣಿ, ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಬಿ.ಇಡಿ ಮತ್ತು ಎಮ್.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ರಾಜಶೇಖರ ಶಿರವಾಳಕರ್, ನ್ಯಾಕ್ ಐ.ಕ್ಯೂ.ಎ.ಸಿ.ನ ಸಂಯೋಜಕರಾದ ಡಾ.ಗೀತಾ ಆರ್.ಎಂ., ಕಾಲೇಜಿನ ಪ್ರಾಧ್ಯಾಪಕರಾದ ಡಾ.ಓಂಪ್ರಕಾಶ ಎಚ್.ಎಂ., ಶರಣಪ್ಪ ಚವ್ಹಾಣ, ಮುರಳೀಧರ ಕುಲಕರ್ಣಿ, ಅನೀಲ ಜಾಧವ, ಸಂಗಣ್ಣಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.