ರೇಷ್ಮಾಗೆ ಪಿಎಚ್‍ಡಿ

ವಿಜಯಪುರ,ಫೆ.7: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರೇಷ್ಮಾ ಚೀರಲದಿನ್ನಿ ಅವರು ಸಲ್ಲಿಸಿದ್ದ “ಎಜ್ಯುಕೇಶನಲ್ ಕಾಂಟ್ರಿಬ್ಯೂಶನ್ಸ್ ಆಫ್ ಮೌಲಾನಾ ಅಬುಲ್ ಕಲಾಮ ಆಜಾದ ಆಂಡ್ ಇಟ್ಸ್ ರೆಲೆವನ್ಸ್ ಟು ಪ್ರಸೆಂಟ್ ಸಿನಾರಿಯೋ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.
ರೇಷ್ಮಾ ಚೀರಲದಿನ್ನಿ ಅವರು ಶಿಕ್ಷಣ ವಿಭಾಗದ ಪ್ರೊ. ಬಿ.ಎಲ್.ಲಕ್ಕಣ್ಣವರ್ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ರೇಷ್ಮಾ ಚೀರಲದಿನ್ನಿ ಅವರನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಪ್ರೊ. ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.