ರೇಶ್ಮಿ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆ

ಕಲಬುರಗಿ:ನ.21:ನಗರದ ರೇಶ್ಮಿ ವಿದ್ಯಾಭವನದ ಅಡಿಯಲ್ಲಿ ಕಾಲೇಜುಗಳು ಆರಂಭವಾಗಿರುವುದರಿಂದ ಆರೋಗ್ಯ ಇಲಾಖೆಯ ವತಿಯಿಂದ ಕೋವಿಡ್- 19 ಪರೀಕ್ಷೆ ನಡೆಸಲಾಯಿತು. ರೇಶ್ಮಿ ಪದವಿ ಮಹಾವಿದ್ಯಾಲಯದ ಅಂತಿಮ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಬಿಇಡಿ ವಿದ್ಯಾರ್ಥಿಗಳು, ಶರಗೇಶ್ವರಿ ಮಹಿಳಾ ಬಿಇಡಿ ಹಾಗೂ ಪದವಿ ಮಹಿಳಾ ವಿದ್ಯಾರ್ಥಿನಿಯರು, ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಎಲ್ಲ ಸಿಬ್ಬಂದಿಗಳು ಉಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡರು.
ಸೇಡಂ ಆರೋಗ್ಯ ಇಲಾಖೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಪರೀಕ್ಷೆ ಜರುಗಿತು. ಕಾಲೇಜಿನ ಎಲ್ಲ ಕೊಠಡಿಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪರಿಸಲಾಯಿತು. ಒಂದು ಬೆಂಚಿನಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಭಾರತಿ ಎನ್. ರೇಶ್ಮಿ, ಖಜಾಂಚಿ ಡಾ. ಗೀತಾ ಕೆ.ಎಂ., ಕಾರ್ಯದರ್ಶಿ ಶರದ್ ರೇಶ್ಮಿ, ಶಶಿರ್ ರೇಶ್ಮಿ, ಡಾ. ಶೈಲಾಜ್ ಪಾಟೀಲ್, ಅಶ್ವಿನಿ ರಾಜಗಿರ್, ಜಯಲಕ್ಷ್ಮೀ ಪಾಟೀಲ್, ಶ್ರೀಶೈಲ್ ಮಠಪತಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.