ರೇಶನ್ ವಿತರಿಸಿ ಮಾನವೀಯತೆ ಮೆರೆದ ಡಿಸಿಎಂ ಸವದಿ

ಅಥಣಿ,ಮೇ28: ದೇಶಾದ್ಯಂತ ಕೋವಿಡ್-19 ಮಹಾಮಾರಿ ಸೋಂಕಿನಿಂದ ಲಾಕ್ ಡೌನ್ ಮುಂದುವರೆದು ತಾಲೂಕಿನ ಎಲ್ಲ ಜನತೆ ಉದ್ಯೋಗವಿಲ್ಲ ಇದರಿಂದಾಗಿ ನಿತ್ಯ ಹೊಟ್ಟೆಗೆ ಏನು ತಿನ್ನುವುದು ಸಂಸಾರವನ್ನು ಹೇಗೆ ಮುನ್ನಡೆಸುವುದೆಂದು ಅಂದುಕೊಳ್ಳುತ್ತಿರುವಾಗ ಪಟ್ಟಣ ಹಾಗೂ ತಾಲೂಕಿನ ಎಲ್ಲ ಹಳ್ಳಿಗಳನ್ನು ಸೇರಿದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ನೇತೃತ್ವದಲ್ಲಿ ಬಿಪಿಎಲ್, ಎಪಿಎಲ್ ಸೇರಿದಂತೆ ಎಲ್ಲ ಕುಟುಂಬದವರಿಗೆ ಸೇರಿ ಅಥಣಿ ಮತಕ್ಷೇತ್ರದ ಸುಮಾರು 70000 ಮನೆಗಳ 2.5 ಲಕ್ಷ ಜನರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಮತೊಮ್ಮೆ ಲಕ್ಷ್ಮಣ ಸವದಿಯವರು ಮಾನವೀಯತೆ ಮೆರೆದಿದ್ದಾರೆ.

ಕಳೆದ ಸಲ ಕೋವಿಡ್ ಸಂದರ್ಭದಲ್ಲಿಯೂ ಕೂಡ ಪಟ್ಟಣದ ಎಲ್ಲ ಬಿಪಿಎಲ್ ಕುಟುಂಬದವರಿಗೆ 23 ವಾರ್ಡುಗಳಲ್ಲಿ ಸುಮಾರು 25 ಸಾವಿರ ಕುಟುಂಬಗಳಿಗೆ 4 ಸಾವಿರ ಕ್ವಿಂಟಲ್ ಆಹಾರ ಧಾನ್ಯವನ್ನು ತಲಾ 5 ಕೆಜಿ ಗೋದಿ 5 ಕೆಜಿ ಜೋಳವನ್ನು ವಿತರಿಸುವ ಮೂಲಕ ಸವದಿಯವರು ಮಾನವೀಯತೆ ಮೆರೆದಿದ್ದರು.

ಅದಕ್ಕಿಂತಲೂ ಮುಂಚೆ ವರ್ಷ ಕೃಷ್ಣೆಗೆ ಪ್ರವಾಹ ಬಂದಾಗ ತಮ್ಮ ಜೀವದ ಹಂಗು ತೊರೆದು ಅಥಣಿ ಕ್ಷೇತ್ರದ ನದಿ ತೀರದ ಜನರನ್ನು ಪ್ರವಾಹದ ದವಡೆಯಿಂದ ಪಾರು ಮಾಡುವುದರ ಜೊತೆಗೆ ಅವರಿಗೆ ಅನ್ನ, ಅರಿವೆ, ಹೊದಿಕೆ ನೀಡಿ ಅವರ ಬೆನ್ನಿಗೆ ತಿಂತಿದ್ದರು. ಈಗ ಮಹಾಮಾರಿ ರೋಗ ಆವರಿಸಿದ್ದು ಈಗಲೂ ಸಹ ಅವರಿಗೆ ಆಶ್ರಯದಾತರಾಗಿ ಮತಕ್ಷೇತ್ರದ ಜನತೆಗೆ ಆತ್ಮಬಲ ತುಂಬಿದ್ದಾರೆ.
ಕಳೆದ ಒಂದು ವರ್ಷದಿಂದ ಮಹಾಮಾರಿ ಕೊರೊನಾದಿಂದ ಲಾಕ್‍ಡೌನ್ ಆದಾಗಿನಿಂದ ಜನರಿಗೆ ದುಡಿಯಲು ಕೆಲಸವಿಲ್ಲದೆ ಮನೆಯಲ್ಲಿಯೇ ಇರುವದರಿಂದ ಮತಕ್ಷೇತ್ರದ ಎಲ್ಲ ಕುಟುಂಬಗಳಿಗೆ ಲಕ್ಷ್ಮಣ ಸವದಿಯವರು ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ನೊಂದಣಿಯಾಗಿರುವ ಸತ್ಯ ಸಂಗಮ ಸೇವಾ ಟ್ರಸ್ಟ್ ಹೆಸರಿನಲ್ಲಿ ಅಥಣಿ ಮತಕ್ಷೇತ್ರದ ಎ.ಪಿ.ಎಲ್ ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ, ರೇಷನ್ ಕಾರ್ಡು ಇಲ್ಲದೆ ಇರುವವರನ್ನೂ ಒಳಗೊಂಡಂತೆ ಎಲ್ಲ ಕೂಲಿ ಕಾರ್ಮಿಕರಿಗೆ ಹಾಗೂ ಕಾರ್ಡ್ ಇಲ್ಲದೆ ಇರುವ ಬಡವರಿಗೆ, ವಲಸಿಗರಿಗೆ ಸೇರಿದಂತೆ ಒಟ್ಟು 70 ಸಾವಿರ ಕುಟುಂಬಗಳ ಎರಡೂವರೆ ಲಕ್ಷ ಜನರಿಗೆ ಉಚಿತವಾಗಿ ಒಂದು ತಿಂಗಳಿಗೆ ಆಗುವಷ್ಟು 7 ಕಿಲೋ ಗೋಧಿ, 1ಕಿಲೋ ಬೇಳೆ, 1ಕಿಲೋ ಸಕ್ಕರೆ, 1 ಕಿಲೋ ಅವಲಕ್ಕಿ, 1 ಕಿಲೋ ತೊಗರಿಬೇಳೆ, 1 ಕಿಲೋ ಕಡಲೆಬೇಳೆ, 1ಕಿಲೋ ಬೆಲ್ಲ, 250 ಗ್ರಾಂ ಟೀ ಪೌಡರ್, 100 ಗ್ರಾಂ ಸಾಂಬರ್ ಪದಾರ್ಥ, 100 ಗ್ರಾಂ ಖಾರ, 180 ಗ್ರಾಂ ತೂಕದ 2 ಬಿಸ್ಕೆಟ್ ಪ್ಯಾಕೆಟ್ ಹಾಗೂ 1 ಕಿಲೋ ರವೆ ಸೇರಿದಂತೆ ರೇಷನ್ ಕಿಟ್ ವಿತರಣೆ ಮಾಡುತ್ತಿದ್ದಾರೆ.

ಇವರ ಈ ಸೇವೆ ಮತಕ್ಷೇತ್ರದ ಎಲ್ಲ ಜನತೆಗೆ ತಲುಪಿ ಎಲ್ಲರೂ ಚನ್ನಾಗಿರಲೆಂದು ಅನೇಕರ ಆಶಯವಾಗಿದೆ.