ರೇವಯ್ಯ ಒಡೆಯ ರಿಂದ ತೀವ್ರ ಖಂಡನೆ

ಕೊಟ್ಟೂರು ನ 18 :ತಾಲೂಕಿನ ಉಜ್ಜಯಿನಿ ಪೀಠದಲ್ಲಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಇರುವಾಗಲೇ ತ್ರಿಲೋಚನ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಿರುವ ಪ್ರಕ್ರಿಯೆ ಸರಿಯಲ್ಲ’ ಎಂದು ಉಜ್ಜಯಿನಿ ಗ್ರಾಮ ಪ್ರತಿಷ್ಠಾನದ ಅಧ್ಯಕ್ಷ ರೇವಯ್ಯ ಒಡೆಯರ್‌ ಆಕ್ಷೇಪಿಸಿದ್ದಾರೆ.
ಇತ್ತೀಚೆಗೆ ಲಕ್ಷ್ಮೇಶ್ವರದ ಮುಕ್ತಿ ಮಂದಿರದ ಸಭೆಯಲ್ಲಿ ಈ ನೇಮಕ ನಡೆದಿದೆ. ಆದರೆ ಅಪಾರ ಭಕ್ತರುಆನೇಕಶಾಖಾ ಮಠಗಳಿರುವ ಮಠಕ್ಕೆ ಪೀಠಾಧಿಪತಿಯನ್ನು ನೇಮಿಸುವಾಗ ಅನುಸರಿಸಬೇಕಾದ ನಿಯಮಾವಳಿಗಳು ಬಾಳೆಹೊನ್ನೂರಿನ ವೀರ
ಸೋಮೇಶ್ವರ ಸ್ವಾಮೀಜಿ ಮತ್ತು ಕೇದಾರ ಮಠದ ಭೀಮಾಶಂಕರ ಸ್ವಾಮೀಜಿಗೆ ತಿಳಿದಿರಲಿಲ್ಲವೇ?’ ಎಂದು ಅವರು ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ನಿಯಮ ಮೀರಿ ನೇಮಿಸಿರುವ ಸಭೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಭಾಗವಹಿಸಿದ್ದಿರಬೇಕು. ಅಂಥ ಸಂದರ್ಭಗಳಲ್ಲಿ ಕೈಗೊಳ್ಳುವ ತೀರ್ಮಾನ ಹೇಗೆ ಸರ್ವಮಾನ್ಯವಾಗುತ್ತದೆ’ ಎಂದು ಕೇಳಿದ್ದಾರೆ.
ಹಾಲುಮತ ಕುಲಗುರು ರೇವಣಸಿದ್ದೇಶ್ವರ ಅವರದ್ದು ಎನ್ನಲಾಗಿರುವ ಬಾಳೆಹೊನ್ನೂರು ಪೀಠಕ್ಕೆ ಕಾಗಿನೆಲೆ ಸ್ವಾಮೀಜಿಯವರು ತಮಗೆ ಬೇಕೆನಿಸಿದವರನ್ನು ಅಧ್ಯಕ್ಷರನ್ನಾಗಿಸಿದರೆ ವೀರಸೋಮೇಶ್ವರ ಸ್ವಾಮೀಜಿ ಒಪ್ಪಿಕೊಳ್ಳುತ್ತಾರೆಯೇ’ ಎಂದು ‍ಪ್ರಶ್ನಿಸಿದ್ದಾರೆ.
ತ್ರಿಲೋಚನ ಸ್ವಾಮೀಜಿಯ ಬಗ್ಗೆ ನಮಗೆ ವಿಶ್ವಾಸವಿಲ್ಲ. ಅಂಥ ನಂಬಿಕೆ, ವಿಶ್ವಾಸವಿದ್ದರೆ ಅವರನ್ನೇ ವೀರಸೋಮೇಶ್ವರ ಸ್ವಾಮೀಜಿ ತಮ್ಮ ಪೀಠಕ್ಕೆ ನೇಮಕ ಮಾಡಿಕೊಳ್ಳಲಿ’ ಎಂದು ಹೇಳಿದ್ದಾರೆ.