ರೇವಪ್ಪಯ್ಯ ಜಾತ್ರೆ ಅಖಂಡ ಶಿವನಾಮ ಸಪ್ತಾಹಗಮನ ಸೆಳೆದ ರಂಗೋಲಿ

ಸಂಜೆವಾಣಿ ವಾರ್ತೆ
ಔರಾದ: ಫೆ.23:ತಾಲೂಕಿನ ತೇಗಂಪೂರ ಗ್ರಾಮದಲ್ಲಿ ಏಳು ದಿನಗಳ ಕಾಲ ಶಿವನಾಮ ಸಪ್ತಹದ ನಿಮಿತ್ತ ಪ್ರತಿ ನಿತ್ಯ ಬೆಳಿಗ್ಗೆ ಐದು ಗಂಟೆಗೆ ರೇವಪಯ್ಯಾ ಸ್ವಾಮಿ ಮಂದಿರಕ್ಕೆ ಬಂದು ಮಂದಿರ ಸ್ವಚ್ಛಗೋಳಿಸಿ ದಿನನಿತ್ಯವು ವಿನೂತನವಾದ ರೀತಿಯಲ್ಲಿ ರಂಗೋಲಿಯನ್ನು ಹಾಕಿ ಭಕ್ತಿ ಸೇವೆಯನ್ನು ಮಾಡಿರುವ ಪಲ್ಲವಿ ಬಿರಾದರ ಕಾರ್ಯವನ್ನು ಗ್ರಾಮಸ್ಥರು ಹಾಗೂ ದೇವಸ್ಥಾನ ಕಮಿಟಿ ಸದಸ್ಯರು ಕೊಂಡಾಡುತ್ತಿದ್ದಾರೆ.
ಅಧೂನಿಕ ಯುಗದಲ್ಲಿ ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕøತಿಯಿಂದ ದೂರು ಉಳಿದು ಭೋದನೆಗೆ ಯುವ ಸಮೂಹ ಸಿಮೀತವಾಗುತ್ತಿದೆ ಎನ್ನುವುದು ತೇಗಂಪೂರ ಗ್ರಾಮದಲ್ಲಿನ ಪಲ್ಲವಿ ಬಿರಾದರ ಸುಳ್ಳಾಗಿಸಿ ನಾನೂ ಎಲ್ಲಾ ಕೆಸಕ್ಕೂ ಸೈ ಎನ್ನುವಂತೆ ಮಾದರಿ ಕೆಲಸ ಮಾಡಿದ್ದಾರೆ.
ಮಂದಿರದಲ್ಲಿ ನಿತ್ಯ ನಡೆದ ಶಿವನಾಮ ಸಪಹ್ತ ಕಾರ್ಯಕ್ರಮ ಪ್ರತಿನಿತ್ಯ ಬೆಳಿಗ್ಗೆ ಐದು ಗಂಟೆಗೆ ಮಂದಿರಕ್ಕೆ ಬಂದು ಮಂದಿರ ಮುಂಭಾಗವನ್ನು ಸ್ವಚ್ಛ ಮಾಡಿ ವಿನೂತನವಾದ ರೀತಿಯಲ್ಲಿ ನಿತ್ಯವು ಒಂದೊಂದು ರೀತಿಯ ರಂಗೋಲಿಯನ್ನು ಹಾಕಿ ಮಂದಿರಕ್ಕೆ ಮೆರಗು ನೀಡುವುದರ ಜೋತೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಗಮನ ರಂಗೋಲಿ ಕಡೆ ಸೆಳೆಯುವಂತೆ ಮಾಡಿದರು.
ತನ್ನ ಓದಿನೊಂದಿಗೆ ಚಿತ್ರಕಲೆಯನ್ನು ಉತ್ತಮವಾದ ರೀತಿಯಲ್ಲಿ ಕಲಿತುಕೊಂಡು ನಿತ್ಯ ಭಕ್ತಯಿಂದ ಸೇವೆ ಮಾಡಿದ ಪಲ್ಲವಿ ಇದೀಗ ಗ್ರಾಮದಲ್ಲಿನ ಹಿರಿಯ ಪ್ರೀತಿಗೆ ಪಾತ್ರರಾಗಿದ್ದಾರೆ.
ನಾನೂ ನಮ್ಮೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಯಿಂದ ರಂಗೋಲಿಯನ್ನು ಹಾಕುವ ಮೂಲಕ ತನ್ನಿಂದಾಗುವ ಅಳಿಲು ಸೇವೆಯನ್ನು ಮಾಡಿರುವೇ ಬೇರೆಯವರಂತೆ ತೋರಿಕೆಗೆ ನಮ್ಮ ಕೆಲಸ ಮಾಡಿಲ್ಲ ನನ್ನ ರಂಗೋಲಿಯನ್ನು ನೋಡಿ ಜನರು ಹಾಗೂ ನಮ್ಮೂರಿನ ಹಿರಿಯರು ತುಂಬಾ ಚೆನ್ನಾಗಿ ಬಂದಿದೆ ಎಂದು ಬೆನ್ನು ತಟ್ಟಿದಾಗ ಖುಷಿಯಾಗಿತ್ತು ಎನ್ನುವುದು ಪಲ್ಲವಿ ಬಿರಾದರ ಮಾತಾಗಿದೆ.